ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಟೆಂಪೊ ಮುಖಾಮುಖಿ ಡಿಕ್ಕಿ, ಮೂವರ ದುರ್ಮರಣ!

ಮಂಡ್ಯದ ತಳಗವಾದಿ ಗೇಟ್ ಬಳಿ ಟೆಂಪೋ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮ ಮೂವರು ದಾರುಣ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಡ್ಯ: ಮಂಡ್ಯದ ತಳಗವಾದಿ ಗೇಟ್ ಬಳಿ ಟೆಂಪೋ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮ ಮೂವರು ದಾರುಣ ಸಾವನ್ನಪ್ಪಿದ್ದಾರೆ.
ವೇಗವಾಗಿ ಬರುತ್ತಿದ್ದ ಟೆಂಪೋ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಮೃತರನ್ನು ತಳಗವಾದಿ ಗ್ರಾಮದ 52 ವರ್ಷದ ಜಾನಕಿ, 56 ವರ್ಷದ ದೇವಿಪುರದ ಸೌಭಾಗ್ಯ ಮತ್ತು 35 ವರ್ಷದ ಅಶೋಕ್ ಎಂದು ಗುರುತಿಸಲಾಗಿದೆ. ಇನ್ನು ಜಯಶೀಲ ಮತ್ತು ನಾಗರಾಜು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com