ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರು ತರಬೇತಿಗೆ ಬಳಸಿದ್ದ ಪಿಸ್ತೂಲ್ ಪತ್ತೆ

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಮಗಳು, ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಕರ್ನಾಟಕ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (ಎಸ್ಐಟಿ) 7.65 ಎಂಎಂ ಪಿಸ್ತೂಲ್....
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಖ್ಯಾತ ಪತ್ರಕರ್ತ ಪಿ. ಲಂಕೇಶ್ ಮಗಳು, ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಕರ್ನಾಟಕ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (ಎಸ್ಐಟಿ) 7.65 ಎಂಎಂ ಪಿಸ್ತೂಲ್ ಅನ್ನು ವಶಕ್ಕೆ ಪಡೆದಿದೆ. ಈ ಪಿಸ್ತೂಲನ್ನು ಹಂತಕರು ಗೌರಿ ಹತ್ಯೆಗಾಗಿ ಬಳಸಿದ್ದು ಕೊಲೆಗೂ ಮುನ್ನ ಹಂತಕ ಈ ಪಿಸ್ತೂಲಿನಿಂದ ತರಬೇತಿ ಪಡೆದಿದ್ದನೆಂದು ತಿಳಿದುಬಂದಿದೆ.
ಎಫ್ಎಸ್ಎಲ್ ಈ ಕಂಟ್ರಿ ಮೇಡ್ 7.65ಎಂಎಂ ಪಿಸ್ತೂಲನ್ನು ಗುರುತಿಸಿದ್ದು ಗೌರಿ ಆರೋಪಿ ಕೊಲೆಗಾರ ಪರಶುರಾಮ್ ವಾಗ್ಮೋರೆ ಹಾಗೂ ಆತನ ಸಹಾಯಕ ಗಣೇಶ್ ಮಿಶ್ಕಿನ್ ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ನಗರದಲ್ಲಿನ ಗೌರಿ ಲಂಕೇಶ್ ಅವರ ಮನೆ ಹೊರಗೆ ಅವರನ್ನು ಹತ್ಯೆ ಮಾಡುವುದಕ್ಕೆ ಮುನ್ನ ಈ ಪಿಸ್ತೂಲನ್ನು ಬಳಸಿ ತರಬೇತಿ ಪಡೆದಿದ್ದ್ದರು. ಮೂಲಗಳ ಪ್ರಕಾರಎಫ್ಎಸ್ಎಲ್ ಸಲ್ಲಿಸಿದ ಬ್ಯಾಲಿಸ್ಟಿಕ್ ವರದಿಯು ಬೆಳಗಾವಿಯ ಅರಣ್ಯದಿಂದ ವಶಪಡಿಸಿಕೊಂಡಿದ್ದ ಆರು ಕಾರ್ಟ್ರಿಜ್ಗಳು ಮತ್ತು ಗುಂಡುಗಳು, ವಾಗ್ಮೊರೆ ಹಾಗೂ ಮಿಶ್ಕಿನ್ ಈ ಪಿಸ್ತೂಲಿನಿಂದಲೇ ತರಬೇತಿಗಾಗಿ ಹಾರಿಸಿದ ಗುಂಡುಗಳಾಗಿದ್ದವು.
ಎಸ್ಐಟಿ ಕಳೆದ ವರ್ಷ ಆಗಸ್ಟ್ ನಲ್ಲಿ ಮಹಾರಾಷ್ಟ್ರದ ನಲಸೋಪಾರಾ ಹಾಗೂ ಪುಣೆಯ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್) ವಶಪಡಿಸಿಕೊಂಡ 16 ಅಕ್ರಮ ಪಿಸ್ತೂಲ್ ಗಳನ್ನು  ಎಫ್ಎಸ್ಎಲ್ ಗೆ ನೀಡಿದ್ದು ಗೌರಿ ಕೊಲೆ ಪ್ರಕರಣದಲ್ಲಿ ಅವುಗಳಲ್ಲಿ ಯಾವುದಾದರೊಂದು  ಪಿಸ್ತೂಲ್ ಬಳಸಲಾಗಿತ್ತೆ ಎಂಬ ಬಗ್ಗೆ  ಪರೀಕ್ಷಿಸಲು ಎಸ್.ಐ.ಟಿ. ಕೋರಿತ್ತು. ಇದೀಗ ಬಂದ ವರದಿಯ ಅನುಸಾರ ಗುಂಡುಗಳು ಹಾಗೂ ಪಿಸ್ತೂಲ್ ಗಳಿಗೆ ಸಾಮ್ಯತೆ ಇದೆ.ಕರ್ನಾಟಕ ಎಫ್ಎಸ್ಎಲ್ ಇದೇ ಮೊದಲ ಬಾರಿಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷವನ್ನು ಒದಗಿಸಿದೆ.ಎಂಎಂ ಕಲಬುರ್ಗಿ ಹಾಗೂ ಗೌರಿ  ಕೊಲೆ ಪ್ರಕರಣಗಳು ಅದರ ಬ್ಯಾಲಿಸ್ಟಿಕ್ ವರದಿಯಲ್ಲಿದ್ದು ಎರಡೂ ಪ್ರಕರಣದಲ್ಲಿ ಒಂದೇ ಪ್ರಕಾರದ 7.65 ಎಂಎಂ ಬಂದೂಕು ಬಳಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಲಬುರ್ಗಿಯನ್ನು ಕೊಂದವರೇ ಗೌರಿ ಹಂತಕನನ್ನಾಗಿ ನೇಮಕ 
ಮೇ 31 ರಂದು ಬೆಂಗಳೂರಿನ ಕರ್ನಾಟಕ ವಿಶೇಷ ತನಿಖಾ ತಂಡ(ಎಸ್ಐಟಿ) ವಶಕ್ಕೆ ಪಡೆದ ಪ್ರವೀಣ್ ಪ್ರಕಾಶ್ ಚತುರ್ (27) ಅಲಿಯಾಸ್ ಚುರಾನ್ ಮಸಾಲೆವಾಲಾ ಅವರು ಕನ್ನಡದ ಖ್ಯಾತ ಸಾಹಿತಿ ಎಂ.ಎಂ. ಕಲಬುರ್ಗಿ ಅವರನ್ನು  ಗಣೇಶ್ ಮಿಶ್ಕಿನ್  ಜತೆಸೇರಿ ಆಗಸ್ಟ್ 30, 2015 ರ ಬೆಳಗ್ಗೆ ಹತ್ಯೆಗೈದಿದ್ದ.ಪ್ರಕಾಶ್ ಧಾರವಾಡದಲ್ಲಿನ ಕಲಬುರ್ಗಿ ನಿವಾಸದ ಹೊರಗೆ ದ್ವಿಚಕ್ರ ವಾಹನ ಪಾರ್ಕ್ ಮಾಡಿದ್ದನೆಂದು ಹೇಳಲಾಗಿದೆ. ಕಳೆದ ವರ್ಷ ಮಹಾರಾಷ್ಟ್ರದ ಎಟಿಎಸ್ ನಿಂದ ಹತ್ಯೆಗೆ ಬಳಕೆಯಾಗಿದ್ದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಗೌರಿ ಹತ್ಯೆ ಪ್ರಕರಣದಲ್ಲಿ ಸಹ ಮಿಶ್ಕಿನ್ ಆರೋಪಿಯಾಗಿದ್ದಾನೆ.
ಅಧಿಕೃತ ಮೂಲಗಳ ಪ್ರಕಾರ, ಅಮೋಲ್ ಕಾಳೆಯಿಂದ ಪ್ರವೀಣ್ "ನೇಮಕವಾಗಿದೆ" 2011 ರಲ್ಲಿಈ ಹತ್ಯೆಗಾಗಿ "ನೇಮಕಾತಿ" ನಡೆದಿದ್ದು ಹಿಂದುತ್ವವನ್ನು ರಕ್ಷಿಸಲು "ಹತ್ಯೆಯ ಗುರಿ" ಹಾಕಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com