ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಲ್ಡರ್ ಸೇರಿ 15 ಮಂದಿಯಿಂದ ಎಸ್ ಬಿಐ ಗೆ 9.39 ಕೋಟಿ ರು ವಂಚನೆ!

ಎಸ್ ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಗೆ ಸುಮಾರು 9.39 ಕೋಟಿ ರು ಹಣವನ್ನು ವಂಚಿಸಿದ ಹಿನ್ನೆಲೆಯಲ್ಲಿ ಬಿಲ್ಟರ್ ಸೇರಿ 15 ಮಂದಿ ವಿರುದ್ಧ ಎಫ್ ಐ ಆರ್ ...
ಬೆಂಗಳೂರು:  ಎಸ್ ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಗೆ ಸುಮಾರು 9.39 ಕೋಟಿ ರು ಹಣವನ್ನು ವಂಚಿಸಿದ ಹಿನ್ನೆಲೆಯಲ್ಲಿ ಬಿಲ್ಟರ್ ಸೇರಿ 15 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಲ್ಲೇಶ್ವಂರ ನಿವಾಸಿ ಎನ್.ಡಿ ರವಿ ಮತ್ತು 15 ಮಂದಿ ವಿರುದ್ಧ ಚೆನ್ನೈ ನ ಕೇಂದ್ರೀಯ ತನಿಖಾ ದಳದ ಆರ್ಥಿಕ ಅಪರಾಧಗಳ ವಿಭಾಗ ಎಫ್ ಐ ಆರ್ ದಾಖಲಿಸಿತ್ತು. ಅದಾದ ನಂತರ ಕೆಲವು ಷರತ್ತುಗಳೊಂದಿಗೆ ಬಿಲ್ಡರ್ ರವಿಗೆ ಜಾಮೀನು ನೀಡಿದೆ.
ಎಸ್ ಬಿಐ ನ ,ಸಹಾಯಕ ಮ್ಯಾನೇಜರ್ ಎಸ್ ಜಿ ಮಂಜುನಾಥ್ ಅವರು ನೀಡಿರುವ ದೂರಿನ ಪ್ರಕಾರ, ಲಾಲ್ ಬಾಗ್ ನಲ್ಲಿರುವ ರಿಟೈಲ್ ಆಸೆಟ್ ಕ್ರೆಡಿಟ್ ಪ್ರೊಸೆಸಿಂಗ್ ಕೇಂದ್ರಕ್ಕೆ ಜನವರಿ 17 2013 ರಂದು ಆಗಮಿಸಿದ ರವಿ, ವೈಟ್ ಪೀಲ್ಡ್ ನಲ್ಲಿರುವ ಸೀಗೆಹಳ್ಳಿಯಲ್ಲಿ 7 ಬ್ಲಾಕ್ ನಲ್ಲಿ 132 ಅಪಾರ್ಟ್ ಮೆಂಟ್ ಕಟ್ಟುತ್ತಿರುವುದಾಗಿ ಹೇಳಿಕೊಂಡು ಭೂ ಮಾಲೀಕರ ಜೊತೆ ಆಗಮಿಸಿದ್ದ, 
ಎಸ್ ಬಿಐ ಗ್ರಾಹಕನಾಗಿದ್ದ ರವಿ ಭೂ ಮಾಲೀಕರನ್ನು ಬ್ಯಾಂಕ್ ಗೆ ಪರಿಚಯಿಸಿದ್ದ,  ಜೊತೆಗೆ ಎಸ್ ಬಿ ಐ ನಲ್ಲಿ ಅವರ ಖಾತೆ ತೆರೆಸಿದ್ದ,. ಎಸ್ ಬಿಐ ಹೌಸಿಂಗ್ ಲೋನ್ ಗಾಗಿ ಅರ್ಜಿ ಹಾಕಿಸಿದ್ದ. ಗಾರ್ಡನ್ ರೆಸಿಡೆನ್ಸಿ ಪ್ರಾಜೆಕ್ಟ್ ಗಾಗಿ 15 ಮಂದಿಯನ್ನು ಕರೆದುಕೊಂಡು ಬಂದಿದ್ದ.
ಸಾಲ ಪಡೆಯಲು ಆತ ನೀಡಿದ್ದ ಆದಾಯ ತೆರಿಗೆ ಹಾಗೂ ವೇತನ ಪ್ರಮಾಣ ಪತ್ರಗಳು ನಕಲಿಯಾಗಿದ್ದವು,  ವಂಚನೆ ಗೊತ್ತಾದ ನಂತರ  3ನೇ ಆಗಸ್ಟ್ 2018 ರಂದು ಆತನ ವಂಚನೆ ತಿಳಿದು ಬಂದಿದೆ,  ಆತ ಬೇರೊಂದು ಪ್ರಾಜೆಕ್ಟ್ ನ  ಪ್ರಮಾಣ ಪತ್ರಗಳನ್ನು ನೀಡಿ ಹಣ ಪಡೆದಿದ್ದು ಬೆಳಕಿಗೆ ಬಂದಿದೆ.
ಉಳಿದ 15 ಮಂದಿ ನೀಡಿದ್ದ ವಿಳಾಸ ಕೂಡ ನಕಲಿಯಾಗಿದೆ, ಅದರಲ್ಲಿ ಯಾರೋಬ್ಬರು ನೌಕರಿಯಲ್ಲಿಲ್ಲ, ಅವರು ಸುಳ್ಳು ದಾಖಲಾತಿಗಳು ಎಂಬುದು ಗೊತ್ತಾಗಿದೆ, ಅದರಲ್ಲಿ ಇಬ್ಬರು ಕಾರ್ ಲೋನ್ ಕೂಡ ಪಡೆದುಕೊಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com