ಬೆಂಗಳೂರು: ನೇಣು ಬಿಗಿದುಕೊಂಡು ಪತ್ರಕರ್ತ ಆತ್ಮಹತ್ಯೆ

ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published: 06th June 2019 12:00 PM  |   Last Updated: 06th June 2019 11:27 AM   |  A+A-


journalist has allegedly committed suicide by hanging himself at his residence in KR Puram

ಸಾಂದರ್ಭಿಕ ಚಿತ್ರ

Posted By : SVN SVN
Source : ANI
ಬೆಂಗಳೂರು: ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್‌. ಪುರದ ದೇವಸಂದ್ರ ನಿವಾಸಿ, ಖಾಸಗಿ ಸುದ್ದಿವಾಹಿನಿಯೊಂದರ ಸ್ಥಳೀಯ ವರದಿಗಾರ ನಯಾಝ್‌ ಖಾನ್‌ (36 ವರ್ಷ) ಮಂಗಳವಾರ ತಡರಾತ್ರಿ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ರಾತ್ರಿ 12.30ಕ್ಕೆ ಮನೆಗೆ ಬಂದಿದ್ದ ನಯಾಝ್‌, ಮನೆಯ ಹಾಲ್‌ನಲ್ಲಿ ಮಲಗಿದ್ದರು. ಕೊಠಡಿಯಲ್ಲಿ ಮಕ್ಕಳ ಜೊತೆ ಮಲಗಿದ್ದ ಪತ್ನಿ, ಬುಧವಾರ ನಸುಕಿನ 6.30ಕ್ಕೆ ಎದ್ದು ನೋಡಿದಾಗ ಪತಿ ಆತ್ಮಹತ್ಯೆ ಮಾಡಿರುವುದು ಗೊತ್ತಾಗಿದೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ.

ಪೊಲೀಸ್‌ ಕಮಿಷನರ್‌ ಸುನೀಲ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಅಂತ್ಯ ಕ್ರಿಯೆಗಾಗಿ ನಯಾಝ್‌ ಅವರ ಸ್ವಂತ ಊರು ಚಿಂತಾಮಣಿಗೆ ಕೊಂಡೊಯ್ಯಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp