ವಿಜಯಪುರ: ಗೋಳ ಗುಮ್ಮಟ ಹೊರ ವಿನ್ಯಾಸ ದುರಸ್ತಿಗೆ 1 ಕೋಟಿ ರು. ಕೋರಿಕೆ

ವಿಶ್ವ ಪ್ರಸಿದ್ಧ ಗೋಳಗುಮ್ಮಟ ಹೊರ ವಿನ್ಯಾಸ ಶೀಘ್ರದಲ್ಲೇ ನವೀಕರಣಗೊಳ್ಳಲಿದೆ, ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಾಚ್ಯ ...
ಗೋಳಗುಮ್ಮಟ
ಗೋಳಗುಮ್ಮಟ
ವಿಜಯಪುರ: ವಿಶ್ವ ಪ್ರಸಿದ್ಧ  ಗೋಳಗುಮ್ಮಟ  ಹೊರ ವಿನ್ಯಾಸ ಶೀಘ್ರದಲ್ಲೇ ನವೀಕರಣಗೊಳ್ಳಲಿದೆ, ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಾಚ್ಯ ಸಂಶೋಧನಾ ಇಲಾಖೆ ಅಧಿಕಾರಿಗಳು ಹಣಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
1 ಕೋಟಿ ರು ಹಣ ನೀಡುವಂತೆ ಏಪ್ರಿಲ್ ತಿಂಗಳಲ್ಲಿ ಮನವಿ ಸಲ್ಲಿಸಿದೆ, ಪ್ರಾಚ್ಯ ಸಂಶೋಧನಾ ಇಲಾಖೆಯ ತಜ್ಞರ ತಂಡ ಕೆಲ ದಿನಗಳ ಹಿಂದೆ,ಗೋಲ್ ಗುಂಬಜ್ ಗೆ ಭೇಟಿ ನೀಡಿತ್ತು. ಏನೆಲ್ಲಾ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ವರದಿ ಸಲ್ಲಿಸಿತ್ತು.
ಆ ವರದಿಯ ಆದಾರದ ಮೇಲೆ ಅದಕ್ಕೆ ತಗಲು ವೆಚ್ಚವನ್ನು  ಅಂದಾಜು ಮಾಡಿ ಮೇಲಧಿಕಾರಿಗಳಿಗೆ ನೀಡಿದೆ, ಆದಷ್ಟ ಬೇಗ ಇದಕ್ಕೆ ಅನುಮೋದನೆ ಸಿಗಲಿದೆ ಎಂದು ಹಿರಿಯ ಅಧಿಕಾರಿ ಮೌನೇಶ್ ಕುರಾವತ್ತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com