ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 10 ಮಂದಿ ಕುಖ್ಯಾತ ಮನೆಗಳ್ಳರ ಗ್ಯಾಂಗ್ ಸೆರೆ

ರಾಜಾಜಿ ನಗರದ ಮನೆಯೊಂದರಲ್ಲಿ ದರೋಡೆ ಮಾಡಿದ್ದ 10 ಜನ ಕಳ್ಳರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

Published: 07th June 2019 12:00 PM  |   Last Updated: 07th June 2019 03:50 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : UNI
ಬೆಂಗಳೂರು: ರಾಜಾಜಿ ನಗರದ ಮನೆಯೊಂದರಲ್ಲಿ ದರೋಡೆ ಮಾಡಿದ್ದ 10 ಜನ ಕಳ್ಳರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರ ನಗರದ ಕೆ.ಭಾಸ್ಕರ್ (41), ಬಿ.ಆರ್.ಶಶಿಧರ್ (41), ಆನಂದ್ ಎನ್ (30), ಆರ್.ಟಿ.ನಗರದ ಮದನ್ (33), ಪ್ರಕಾಶನಗರದ ಎಂ.ರಂಗನಾಥ್ (31), ಸೂರಿ (36), ಸಂತು (34), ಮಲ್ಲೇಶ್ವರಂದ ಕಿರಣ್ ಹಾಗೂ ರಾಜಾಜಿನಗರದ ರಮೇಶ್ (34) , ಸುರೇಶ್ (30) ಬಂಧಿತ ಆರೋಪಿಗಳು.

ರಾಜಾಜಿನಗರದ 3ನೇ ಬ್ಲಾಕ್ ನ ಎನ್.ಗಿರಿಧರ್ ಎಂಬುವವರು ತಾವು ಮನೆಯಲ್ಲಿ ಇಲ್ಲದಿದ್ದಾಗ ಮೇ.12ರಂದು ಬೆಳಿಗ್ಗೆ 5.30ಗಂಟೆಯಿಂದ 6.30ರ ಸಮಯದಲ್ಲಿ ಒಟ್ಟು 10ರಿಂದ 15ಜನರ ತಂಡ ಮನೆಯ ಗೇಟ್ ಮುರಿದು ಮನೆಗೆ ನುಗ್ಗಿ, ಕಿಟಕಿ- ಬಾಗಿಲುಗಳನ್ನು ಮುರಿದು ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಚಿನ್ನಾಭರಣ, ನಗದು ಹಣ ಸೇರಿ ಸ್ವತ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ಪ್ರಕರಣದ ಜಾಡು ಹಿಡಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp