ಅನುಮತಿಯಿಲ್ಲದೇ ಫೇಸ್ ಬುಕ್ ಗೆ ಪತಿಯಿಂದ ಫೋಟೋ ಅಪ್ ಲೋಡ್: ವಿಚ್ಛೇದನ ಕೋರಿದ ಪತ್ನಿ!

ತನ್ನ ಅನುಮತಿಯಿಲ್ಲದೇ ಫೇಸ್ಬುಕ್ ಗೆ ಫೋಟೋ ಅಪ್ ಲೋಡ್ ಮಾಡಿದ್ದರಿಂದ ಆಕ್ರೋಶಗೊಂಡ ಪತ್ನಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾಳೆ...

Published: 07th June 2019 12:00 PM  |   Last Updated: 07th June 2019 11:05 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಧಾರವಾಡ: ತನ್ನ ಅನುಮತಿಯಿಲ್ಲದೇ ಫೇಸ್ಬುಕ್ ಗೆ ಫೋಟೋ  ಅಪ್ ಲೋಡ್ ಮಾಡಿದ್ದರಿಂದ ಆಕ್ರೋಶಗೊಂಡ ಪತ್ನಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾಳೆ
.
ಇದರಿಂದ ಕಂಗಾಲಾದ ಪತಿ ಸ್ವಯಂ ಸೇವಾ ಸಂಸ್ಥೆಯೊಂದರ ಮೊರೆ ಹೋಗಿದ್ದು, ಯಾರು ಎಷ್ಟೇ ಪ್ರಯತ್ನಿಸಿದರೂ ಪತಿ ಜೊತೆಗೆ ಜೀವನ ಸಾಗಿಸುವುದಿಲ್ಲ ವಿಚ್ಛೇದನ ಬೇಕೆಂದು ಪತ್ನಿ ಹಠ ಹಿಡಿದಿದ್ದಾರೆ.

ಶಿವಮೊಗ್ಗದ ಈ ಜೋಡಿ ತಿಂಗಳ ಹಿಂದೆ ಮನೆಯವರ ವಿರೋಧದ ಮಧ್ಯೆಯೂ ಇಬ್ಬರು ಮದುವೆಯಾಗಿದ್ದರು. ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶಿವಮೊಗ್ಗ ಮೂಲದ ಯುವಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 

ಆದರೆ, ಮದುವೆಯಾಗಿ ತಿಂಗಳಲ್ಲೇ ಪತ್ನಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಯುವಕ ಫೇಸ್ ಬುಕ್ ನಲ್ಲಿ ದಂಪತಿಯ ಫೋಟೋ ಪೋಸ್ಟ್ ಮಾಡಿದ್ದರಿಂದ ಅಸಮಾಧಾನಗೊಂಡು ಆಕೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಮದ್ಯಸ್ಥಿಕೆ ವಹಿಸಲು ಇಬ್ಬರ ಕುಟುಂಬಸ್ಥರು ನಿರಾಕರಿಸಿದ್ದಾರೆ ಎನ್ನಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp