ರಾಯಚೂರು: ಬಿರುಗಾಳಿ, ಮಳೆಗೆ ಗೋಡೆ ಕುಸಿತ, 5 ತಿಂಗಳ ಮಗು ಸೇರಿ ಮೂವರ ದುರ್ಮರಣ

ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಐದು ತಿಂಗಳ ಮಗು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ರಾಯಚೂರಿನ \ ಕೊತ್ತದೊಡ್ಡಿಯಲ್ಲಿ ನಡೆದಿದೆ.

Published: 07th June 2019 12:00 PM  |   Last Updated: 07th June 2019 02:40 AM   |  A+A-


Raichur: Three people, including a 5-month-old child was killed when a wall collapsed by storm and rain

ರಾಯಚೂರು: ಬಿರುಗಾಳಿ, ಮಳೆಗೆ ಗೋಡೆ ಕುಸಿತ, 5 ತಿಂಗಳ ಮಗು ಸೇರಿ ಮೂವರ ದುರ್ಮರಣ

Posted By : RHN RHN
Source : Online Desk
ರಾಯಚೂರು: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಐದು ತಿಂಗಳ ಮಗು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ರಾಯಚೂರಿನ ಕೊತ್ತದೊಡ್ಡಿಯಲ್ಲಿ ನಡೆದಿದೆ.

ಗುರುವಾರ ರಾತ್ರಿ ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು ಈ ವೇಳೆ ಮನೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ಅಜ್ಜಿ ಹಾಗೂ ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ. ಗೋವಿಂದಮ್ಮ (60), ಮಲ್ಲಿಕಾರ್ಜುನ (5 ತಿಂಗಳು) ಮತ್ತು ಶಿವಾನಿ (3 ವರ್ಷ) ಎಂಬುವವರು ಸಾವಿಗೀಡಾದ ದುರ್ದೈವಿಗಳು.ಘಟನೆಯಲ್ಲಿ ಮಕ್ಕಳ ತಾಯಿ ಸುಜಾತ ಹಾಗೂ ಇನ್ನೋರ್ವ ಮಗಳು  ಗುರುದೇವಿಎಂಬುವವರು ಗಾಯಗೊಂಡಿದ್ದಾರೆ.

ಪತಿಯ ಮನೆಯಲ್ಲಿದ್ದ ಮಗಳನ್ನು ಕಾಣಲು ಗೋವಿಂದಮ್ಮ ಬಂದಿದ್ದರು. ಘಟನೆ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp