ಬೆಂಗಳೂರು: ಸಿಎಂ ಕುಮಾರಸ್ವಾಮಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಬಸ್ ಪಾಸ್ ಬಿಡುಗಡೆ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಮಾರ್ಟ್ ಬಸ್ ಪಾಸ್ ಗಳನ್ನು ಪ್ರಾರಂಭಿಸಿದೆ.
ಬೆಂಗಳೂರು: ಸಿಎಂ ಕುಮಾರಸ್ವಾಮಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಬಸ್ ಪಾಸ್ ಬಿಡುಗಡೆ
ಬೆಂಗಳೂರು: ಸಿಎಂ ಕುಮಾರಸ್ವಾಮಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಬಸ್ ಪಾಸ್ ಬಿಡುಗಡೆ
ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು  ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಮಾರ್ಟ್ ಬಸ್ ಪಾಸ್ ಗಳನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ವಿದ್ಯಾರ್ಥಿಗಳ ಸ್ಮಾರ್ಟ್ ಬಸ್ ಪಾಸ್ ಗಳನ್ನು ಬಿಡುಗಡೆಗೊಳಿಸಿದ್ದಾರೆ. ಒಮ್ಮೆ ಈ ಪಾಸ್ ಖರೀದಿಸಿದ ವಿದ್ಯಾರ್ಥಿಗಳು ಆನ್ ಲೈನ್ ನ ಮೂಲಕವೇ ಪಾಸ್ ನವೀಕರಣ ಮಾಡಿಕೊಳ್ಲಲು ಅವಕಾಶವಿದೆ.
ಕಳೆದ ವರ್ಷವೇ ಬಿಎಂಟಿಸಿ ಈ ಉಪಕ್ರಮ ಪ್ರಾರಂಭಿಸಿತ್ತು. ಆದ್ರೆ ತಾಂತ್ರಿಕ ತೊಂದರೆಗಳಿಂದಾಗಿ ಸಂಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿರಲಿಲ್ಲ.
ಶೈಕ್ಷಣಿಕ ಸಂಸ್ಥೆಗಳು ತಮ್ಮ ಶಾಲೆ ಅಥವಾ ಕಾಲೇಜುಗಳನ್ನು ನೋಂದಣಿ ಮಾಡಿಕೊಳ್ಲುವ ಮೂಲಕ ಲಾಗಿನ್ ಐಡಿ ಪಾಸ್ ವರ್ಡ್ ಪಡೆದುಕೊಳ್ಲಬಹುದು.www.mybmtc.com ಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ಪಾಸ್ ಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಸಂಸ್ಥೆಗಳ ನೋಡಲ್ ಅಧಿಕಾರಿಗಳು ವಿದ್ಯಾರ್ಥಿ ಆನ್ ಲೈನ್ ಪಾಸ್ ಪಡೆಯುವುದಕ್ಕೆ ಅನುಮತಿಸುವುದು ಕಡ್ಡಾಯ ಸ್ಮಾರ್ಟ್ ಕಾರ್ಡ್ ನೀಡಲ್ಪಟ್ಟ ದಿನಾಂಕ ಮತ್ತು ಅದನ್ನೆಲ್ಲಿ ಪಡೆದುಕೊಳ್ಳಬೇಕು  ಎಂಬುದರ ಬಗ್ಗೆ ವಿದ್ಯಾರ್ಥಿಯ ಮೊಬೈಲ್ ಗೆ ಸಂದೇಶ ಕಳಿಸಲಾಗುತ್ತದೆ. ಬಿಎಂಟಿಸಿ ಇದಕ್ಕಾಗಿ 26 ವಿವಿಧ ಪ್ರದೇಶಗಳಲ್ಲಿ 92 ಪಾಸ್ ಕೌಂಟರ್ ಗಳನ್ನು ತೆರೆಯುತ್ತಿದೆ. 2018-19ರಲ್ಲಿ ಸ್ಮಾರ್ಟ್ ಕಾರ್ಡ್ ಸ್ವೀಕರಿಸಿದ ವಿದ್ಯಾರ್ಥಿಗಳು ಬರುವ ವರ್ಷ ಅದನ್ನು ಆನ್ ಲೈನ್ ಮೂಲಕ ನವೀಕರಣ ಮಾಡಿಕೊಳ್ಳಬಹುದು.
ಪ್ರತಿಭಟನೆ
ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ ಖಂಡಿಸಿಬಿಎಂಟಿಸಿ ವಿರುದ್ಧ  ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಜಿಲ್ಲಾಧ್ಯಕ್ಷ ಸಿತಾರ ಪತ್ರಿಕೆಗೆ ತಿಳಿಸಿದ್ದಾರೆ. ಪಿಯು ವಿದ್ಯಾರ್ಥಿಗಳು ಕಳೆದ ವರ್ಷ ನೀಡಲ್ಪಟ್ಟ ಸ್ಮಾರ್ಟ್ ಬಸ್ ಪಾಸ್ ತೋರಿಸಿ ಪ್ರಯಾಣಿಸಬಹುದೆಂದು ಬಿಎಂಟಿಸಿ ಹೇಳಿದ್ದರೂ ಇದು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನ್ವಯವಾದಂತೆ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆಗುತ್ತಿಲ್ಲ. ಅವರು ಕಾಲೇಜು ಬದಲಿಸಿದ್ದರೆ ಆ ಪಾಸ್ ಅನ್ವಯವಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com