ಅಮೆರಿಕದಲ್ಲಿ ರಸ್ತೆ ಅಪಘಾತ: ಬೀದರ್‌ ಮೂಲದ ತಂದೆ, ಮಗಳು ಸಾವು

ಅಮೆರಿಕಾದ ಉತ್ತರ ಕೆರೊಲಿನಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಬೀದರ್ ಮೂಲದ ತಂದೆ ಮತ್ತು ಅವರ ಎರಡು ವರ್ಷದ ಮಗು ಸಾವನ್ನಪ್ಪಿ,...

Published: 08th June 2019 12:00 PM  |   Last Updated: 08th June 2019 04:35 AM   |  A+A-


Bidar based techie and his daughter dies in an accident at US

ಅಮೆರಿಕಾದಲ್ಲಿ ಭೀಕರ ಅಪಘಾತ: ಬೀದರ್ ಮೂಲದ ತಂದೆ-ಮಗಳು ಸಾವು

Posted By : RHN RHN
Source : Online Desk
ಬೆಂಗಳೂರು: ಅಮೆರಿಕಾದ ಉತ್ತರ ಕೆರೊಲಿನಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಬೀದರ್ ಮೂಲದ ತಂದೆ ಮತ್ತು ಅವರ ಎರಡು ವರ್ಷದ ಮಗು ಸಾವನ್ನಪ್ಪಿ, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದ ಶಿವಾಜಿರಾವ್ ದೇಶಮುಖ್‌ (27) ಹಾಗೂ ಅವರ 2 ವರ್ಷದ ಮಗು ದಿವ್ಯಾ ಮೃತಪಟ್ಟಿದ್ದಾರೆ. ದೇಶ್‌ಮುಖ್‌ ಅವರ ಪತ್ನಿ ಮೋನಿಶಾ ದೇಶ್‍ಮುಖ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ದಂಪತಿ, ಮಗುವಿನ ಹುಟ್ಟುಹಬ್ಬ ಆಚರಣೆಗಾಗಿ ಮಗುವಿನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಮೆರಿಕಾದ ಕೊಲಂಬಸ್ ಕೌಂಟಿ ಪ್ರದೇಶದ ಉತ್ತರ ಕೆರೊಲಿನಾ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ

ಅಪಘಾತ ನಡೆದ ವೇಳೆ ಮೊನಿಕಾ ಅವರೇ ಕಾರನ್ನು ಚಲಾಯಿಸುತ್ತಿದ್ದರು. ತಿರುವು ರಸ್ತೆಯಲ್ಲಿ ಎದುರಿಗೆ ವೇಗವಾಗಿ ಬರುತ್ತಿದ್ದ ಟ್ರಕ್ ಅನ್ನು ಗಮನಿಸದೇ ಇದ್ದ ಕಾರಣ ಈ ಘಟನೆ ನಡೆದಿದೆ. ಟ್ರಕ್ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಆದರೆ, ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ

ಮೃತಪಟ್ಟ ದೇಶ್‌ಮುಖ್ ಮತ್ತು ಅವರ ಪುತ್ರಿಯ ಮೃತದೇಹವನ್ನು ಭಾರತಕ್ಕೆ ತರಲು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನೆರವು ನೀಡಬೇಕೆಂದು ದೇಶ್‌ಮುಖ್‌ ಅವರ ಕುಟುಂಬ ಕೋರಿದೆ.

ಬೀದರ್ ಸಂಸದ ಭಗವಂತ್ ಕೂಬಾ ಅವರು ಕೂಡ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಮೃತದೇಹಗಳನ್ನು ಆದಷ್ಟು ಬೇಗ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp