ಉಡುಪಿ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ! ವಿಡಿಯೋ ವೈರಲ್

ತೀವ್ರ ಬರ ಪರಿಸ್ಥಿತಿಯಿಂದ ಕಂಗಲಾಗಿರುವ ಉಡುಪಿ ಜಿಲ್ಲೆಯಲ್ಲಿ ಮಳೆ ಬರಲೆಂದು ದೇವರಲ್ಲಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಲಾಗಿದೆ.
ಕಪ್ಪೆಗಳಿಗೆ ಮದುವೆ
ಕಪ್ಪೆಗಳಿಗೆ ಮದುವೆ
ಉಡುಪಿ: ತೀವ್ರ ಬರ ಪರಿಸ್ಥಿತಿಯಿಂದ ಕಂಗಲಾಗಿರುವ ಉಡುಪಿ ಜಿಲ್ಲೆಯಲ್ಲಿ  ಮಳೆ ಬರಲೆಂದು ದೇವರಲ್ಲಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಲಾಗಿದೆ. 
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆಯನ್ನು ಆಯೋಜಿಸಿತ್ತು.
ಎರಡು ಕಪ್ಪೆಗಳನ್ನು ಹಿಡಿದು ಅವುಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಮಾರುತಿ ವಿಥಿಕಾ ರಸ್ತೆಯಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಬೆಳಗ್ಗೆ 11ಕ್ಕೆ ಕಪ್ಪೆಗಳ ದಿಬ್ಬಣ ಹೊರಟು, ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಿದಿಯೂರು ಹೋಟೆಲ್ ಪಾರ್ಕಿಂಗ್ ಜಾಗ ತಲುಪಿತು.
 ವರ್ಷ ಹೆಸರಿನ ಹೆಣ್ಣು ಕಪ್ಪೆಗೂ ವರುಣ ಹೆಸರಿನ ಗಂಡು ಕಪ್ಪೆಗೂ ಮದುವೆ ನಡೆದಿದೆ. ಕಪ್ಪೆಗಳ ಮದುವೆಗಾಗಿ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com