ತುಮಕೂರು: ವಿಷ ಕುಡಿದ ನಾಟಕವಾಡಿ ಕಿರಾತಕ ಚಿತ್ರದ ಸ್ಟೈಲ್‍ನಂತೆ ಮದುವೆ ದಿನವೇ ಪ್ರಿಯಕರನ ಜೊತೆ ವಧು ಪರಾರಿ!

ಕನ್ನಡ ಸೂಪರ್ ಹಿಟ್ ಕಿರಾತಕ ಚಿತ್ರದಲ್ಲಿ ವಧು ವಿಷ ಕುಡಿದ ನಾಟಕವಾಡಿ ಮದುವೆ ಮನೆಯಿಂದ ಪರಾರಿಯಾಗುವುದನ್ನು ತೋರಿಸಲಾಗಿದೆ. ಅದೇ ರೀತಿ ತುಮಕೂರಿನಲ್ಲಿ ನವ ವಧು ಸಿನಿಮಾ...

Published: 09th June 2019 12:00 PM  |   Last Updated: 09th June 2019 11:39 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ತುಮಕೂರು: ಕನ್ನಡ ಸೂಪರ್ ಹಿಟ್ ಕಿರಾತಕ ಚಿತ್ರದಲ್ಲಿ ವಧು ವಿಷ ಕುಡಿದ ನಾಟಕವಾಡಿ ಮದುವೆ ಮನೆಯಿಂದ ಪರಾರಿಯಾಗುವುದನ್ನು ತೋರಿಸಲಾಗಿದೆ. ಅದೇ ರೀತಿ ತುಮಕೂರಿನಲ್ಲಿ ನವ ವಧು ಸಿನಿಮಾ ಸ್ಟೈನ್ ನಲ್ಲೇ ಮದುವೆ ಮನೆಯಿಂದ ಪರಾರಿಯಾಗಿದ್ದಾಳೆ. 

ಮಳೆಕೋಟೆ ಗ್ರಾಮದ ಯುವತಿಗೆ ದೊಡ್ಡಗೊಳದ ಯವಕ ಮಂಜುನಾಥ್ ಎಂಬುವರೊಂದಿಗೆ ವಿವಾಹ ನಿಶ್ಚಯವಾಗಿರುತ್ತದೆ. ಆದರೆ ಯುವತಿಗೆ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ತನ್ನ ಪ್ರಿಯಕರ ಜೊತೆ ಓಡಿ ಹೋಗುವ ಸಲುವಾಗಿ ಮೈಮೇಲೆ ವಿಷವನ್ನು ಹಾಕಿಕೊಂಡು ತಾನು ವಿಷ ಕುಡಿದಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಇದರಿಂದ ಕಂಗಾಲಾದ ಪೋಷಕರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ತನ್ನ ಅತ್ತೆಯ ಮಗನ ಜೊತೆ ಪರಾರಿಯಾಗಿದ್ದಾಳೆ. 

ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ. ಪೋಷಕರ ಬಲವಂತದಿಂದಾಗಿ ಆಕೆ ಮದುವೆಗೆ ಒಪ್ಪಿಕೊಂಡಿದ್ದಳು. ಇಷ್ಟವಿಲ್ಲದ ಮದುವೆಯಿಂದಾಗಿ ಯುವತಿ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇನ್ನು ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp