ಕಸ್ತೂರಿ ಮೃಗದ ಬೇಟೆ: ಮೂವರು ಅಕ್ರಮ ಬೇಟೆಗಾರರ ಬಂಧನ

ಕಸ್ತೂರಿ ಮೃಗವನ್ನು ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಗಡಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ಕಸ್ತೂರಿ ಮೃಗದ ಬೇಟೆ: ಮೂವರು ಅಕ್ರಮ ಬೇಟೆಗಾರರ ಬಂಧನ
ಕಸ್ತೂರಿ ಮೃಗದ ಬೇಟೆ: ಮೂವರು ಅಕ್ರಮ ಬೇಟೆಗಾರರ ಬಂಧನ
ಹುಬ್ಬಳ್ಳಿ: ಕಸ್ತೂರಿ ಮೃಗವನ್ನು ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಗಡಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದಪೋಲೀಸರು ಮೂವರನ್ನು ಬಂಧಿಸಿದ್ದಾರೆ. ಅದೇ ವೇಳೆ ಮನೆಯಲ್ಲಿದ್ದ ಕೆಲವು ತಾಜಾ ಮಾಂಸದ ಪ್ಯಾಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಯಲ್ಲಿ ಬರುವ ಕಡೆಯ ಗ್ರಾಮ ಕಮರ್ಗಾಂವ್ ಎಂಬಲ್ಲಿ ದಾಳಿ ನಡೆದಿದೆ.ಟಮೋಡೋ ವೆಲ್ಲಿಪ್, ಸಾಂಟೋ ವೆಲ್ಲಿಪ್ ಹಾಗೂ ತುಕಾರಾಂ ವೆಲ್ಲಿಪ್ ಎಂಬುವವರು ಬಂಧಿತರಾಗಿದ್ದಾರೆ. 
ಆದರೆ ಆರೋಪಿಗಳನ್ನು ಬಂಧಿಸಿದ ಕೆಲವೇ ಸಮಯದಲ್ಲಿ ಪೋಲೀಸರೆದುರು ಪ್ರತ್ಯಕ್ಷರಾದ ಗ್ರಾಮಸ್ಥರು ಆರೋಪಿಗಳನ್ನು ಬಿಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಗ್ರಾಮದ ಮುಖ್ಯಸ್ಥ ಮಾತನಾಡಿ ಗ್ರಾಮದೇವತೆಗಾಗಿ ಅವರು ಪ್ರಾಣಿಯನ್ನು ಕೊಂದಿದ್ದಾರೆ. ನಮ್ಮ ಗ್ರಾಮ ದೇವತೆ ಕಾಡಿನ ಪ್ರಾಣಿಯನ್ನು ಕೋರಿದ್ದಳು ಎಂದು ಪೋಲೀಸರೆದುರು ವಾದಿಸಿದ್ದಾರೆ. ಆದರೆ ಪೋಲೀಸರು ವನ್ಯಜೀವಿ ಬೇಟೆ ನಿಷೇಧದ ಕಾನುನು ಕುರಿತು ವಿವರಿಸಿದ್ದಾರೆ.ಆಗ ಗ್ರಾಮಸ್ಥರು "ನಮ್ಮ ದೇವತೆ ನಿಮ್ಮನ್ನು ಸುಮ್ಮನೆ ಬಿಡಲ್ಲ" ಎಂದು ಪೋಲೀಸರಿಗೆ ಧಮ್ಕಿ ಹಾಕಿದ್ದಾರೆ.
"ಬೇಟೆಯಾಡಿದ್ದ ಕಸ್ತೂರಿ ಮೃಗದ ಕೆಲವೇ ಭಾಗದ ಮಾಂಸವನ್ನು ಂಆತ್ರ ನಾವು ವಶಕ್ಕೆ ಪಡೆದಿದ್ದೇವೆ.. ಇನ್ನೂ ಹೆಚಿನ ಪ್ರಮಾಣದ ಮಾಂಸವನ್ನು ಹಳ್ಳಿಗರು ಮನೆಗಳಲ್ಲಿ ಅಡಗಿಸಿಟ್ಟಿರುವ ಶಂಕೆ ಇದೆ.ಗ್ರಾಮಸ್ಥರು ಪ್ರತಿಭಟನೆಗೆ ತೊಡಗಿದಾಗ ಕದ್ರಾ ಪೋಲೀಸ್ ಪಠಾಣೆ ಸಿಬ್ಬಂದಿ ದಾಳಿಯ ನೇತೃತ್ವ ವಹಿಸಿದ ತಂಡದ ನೆರವಿಗೆ ಬಂದಿದೆ. ಅಂತಿಮವಾಗಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಸ್ತೂರಿ ಮೃಗಗಳ ಬೇಟೆ ಕಾನೂನಿಗೆ ವಿರುದ್ಧ. ವನ್ಯಜೀವಿಗಳ ಬೇಟೆಯಾಡುವುದಕ್ಕೆ ನಿಷೇಧವಿದ್ದು ಆರೋಪಿಗಳಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ಆಗುವ ಸಂಭವವಿದೆ ಎಂದು ಕಾಳಿ ಹುಲಿ ಸಾಂರಕ್ಷಿತಾರಣ್ಯ ಅರಣ್ಯಾಧಿಕಾರಿ ಹೇಳೀದ್ದಾರೆ.
ಗ್ರಾಮವು ದಾಂಡೇಲಿಯಿಂದ 135 ಕಿ.ಮೀ ದೂರದಲ್ಲಿದೆ ಮತ್ತು ತಂಡವು ದಾಳಿ ಮಾಡುವುದು ಸಹ ಸುಲಭದ ಮಾತಾಗಿರಲಿಲ್ಲ.ರಸ್ತೆ ಮಾರ್ಗ ಸರಿಯಾಗಿಲ್ಲದ ಕಾರಣ ಗೋವಾದಲ್ಲಿ  30 ಕಿ.ಮೀ ಪ್ರಯಾಣಿಸಿದ ನಂತರ ಗ್ರಾಮವನ್ನು ಪ್ರವೇಶಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com