ಕುಮಟ: ಈ ಹಳ್ಳಿ ರಸ್ತೆ ಕಂಡು ಈ ಊರಿನ ಜೊತೆ ಸಂಬಂಧವೇ ಬೇಡ, ಮದ್ವೆ ಸಹವಾಸವೇ ಬೇಡ ಅಂದ್ರು!

ಉತ್ತರ ಕನ್ನಡ ಜಿಲ್ಲೆ ಮಲೆನಾಡು ಬಾಗದ ಹಳ್ಳಿಯ ಯುವಕ, ಯುವತಿಯರಿಗೆ ವಿವಿಧ ಕಾರಣಗಳಿಂಡ ವಿವ್ಹ ಸಂಬಧಗಳು ಬರುವುದು ವಿಳಂಬವಾಗುತ್ತಿದೆ
ಕುಮಟ: ಈ ಹಳ್ಳಿ ರಸ್ತೆ ಕಂಡು ಮದ್ವೆ ಸಹವಾಸವೇ ಬೇಡ ಅಂದ್ರು!
ಕುಮಟ: ಈ ಹಳ್ಳಿ ರಸ್ತೆ ಕಂಡು ಮದ್ವೆ ಸಹವಾಸವೇ ಬೇಡ ಅಂದ್ರು!
ಕಾರವಾರ: ಉತ್ತರ ಕನ್ನಡ ಜಿಲ್ಲೆ ಮಲೆನಾಡು ಬಾಗದ ಹಳ್ಳಿಯ ಯುವಕ, ಯುವತಿಯರಿಗೆ ವಿವಿಧ ಕಾರಣಗಳಿಂಡ ವಿವ್ಹ ಸಂಬಧಗಳು ಬರುವುದು ವಿಳಂಬವಾಗುತ್ತಿದೆ. ಆದರೆ ಮೇಧಿನಿ ಎಂಬ ಗ್ರಾಮವು ಇನ್ನಷ್ಟು ವಿಶೇಷವಾಗಿದೆ. ಬಾಸ್ಮತಿ ಅಕ್ಕಿಯಂತೆ ಪ್ರಸಿದ್ದವಾಗಿರುವ ಮೇಧಿನಿ ಅಕ್ಕಿ ಬೆಳೆಯುವುದಕ್ಕೆ ಪ್ರಸಿದ್ದವಾಗಿರುವ ಈ ಗ್ರಾಮದ ಕನೆಯಯರಿಗೆ ಸೂಕ್ತ ವಿವಾಹ ಸಂಬಂಧಗಳು ಬರುತ್ತಿಲ್ಲ. ಇದಕ್ಕೆ ಕಾರಣ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದೇ ಆಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಕಾರಣ ಹೊರ ಊರುಗಳು, ಬೇರೆ ಗ್ರಾಮದವರು ಈ ಹಳ್ಳಿಯ ಯುವಕ-ಯುವತಿಯರ ಸಂಬಂಧ ಬೆಳೆಸಲು ಹಿಂದೇಟು ಹಾಕುತ್ತಾರೆ.
53 ಮನೆಗಳು ಮತ್ತು 400 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಗ್ರಾಮ ಮೇಧಿನಿ  ತಾಲೂಕು ಕೇಂದ್ರ ಕುಮಟಾದಿಂದ 38 ಕಿ.ಮೀ ದೂರದಲ್ಲಿದೆ ಮತ್ತು ಸಿದ್ದಾಪುರ ತಾಲ್ಲೂಕು ಗಡಿಯಲ್ಲಿ ಬರುತ್ತದೆ. ಒಮ್ಮೆ ಈ ಗ್ರಾಮಕ್ಕೆ ಹೋಗಬೇಕಾದಲ್ಲಿ ಕಾಡಿನ ಮೂಲಕ ವ ಮಣ್ಣಿನ ರಸ್ತೆಯ ಮೂಲಕ 8 ಕಿ.ಮೀ ನಡೆಯಬೇಕು. ಮಳೆಗಾಲದಲ್ಲಿ ಇದು ಇನ್ನಷ್ಟು ಅಪಾಯಕಾರಿಯಾಗಿರುತ್ತದೆ. ಅರ್ಧದಷ್ಟು ರಸ್ತೆ ಮಾರ್ಗ ಪಶ್ಚಿಮ ಘಟ್ಟಗಳ ನಡುವೆ ಹಾದುಹೋಗುತ್ತದೆ. ಇದು ವಾಹನ ತೆಗೆದುಕೊಂಡು ಹೋಗಲು ಸಹ ಅಪಾಯಕಾರಿ ಮಾರ್ಗವಾಗಿದೆ. ಈ ಗ್ರಾಮದಲ್ಲಿ ಬೆಳೆಯುವ ವಿಭಿನ್ನ ಅಕ್ಕಿಯು ಪಾಯಸದಂತಹಾ ಸಿಹಿ ಪದಾರ್ಥ ಮಾಡಲು ಬಲು ಬೇಡಿಕೆಯನ್ನು ಪಡೆದುಕೊಂಡಿದೆ.ಈ ಅಕ್ಕಿಗೆ ಕೆಜಿಯೊಂದಕ್ಕೆ 100ರಿಂದ 120 ರು. ದರವಿದ್ದರೂ ಸಾರಿಗೆ ವ್ಯವಸ್ಥೆ, ಸಂಪರ್ಕದ ಕೊರತೆಯಿಂದ ಬೆಳೆಯುವವರ ಸಂಖ್ಯೆ, ಖರೀದಿಸುವವರ ಸಂಖ್ಯೆ ಇಳಿಮುಖವಾಗಿದೆ.
\
8 ಕಿಮೀ ಉದ್ದದ ಅಪಾಯಕಾರಿ ಮಾರ್ಗದ ಕಾರಣದಿಂದಾಗಿ ಬೇರೆ ಗ್ರಾಮದ ಜನರು ಈ ಗ್ರಾಮದ ಕನ್ಯೆ ಹಾಗೂ ಯುವಕರನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಬೇಸಿಗೆಯಲ್ಲಿ ವಿದ್ಯುತ್ ಸರಬರಾಜು ಹೊರತುಪಡಿಸಿ ಬೇರೆ ಸೌಲಭ್ಯ ಈ ಗ್ರಾಮದಲ್ಲಿಲ್ಲ ಎಂದು ಗ್ರಾಮದ ನಿವಾಸಿ ಶಿವರಾಮೇಗೌಡ ಹೇಳಿದ್ದಾರೆ. . "ಮಳೆಗಾಲದಲ್ಲಿ, ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತವಾಗುತ್ತದೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಬೇರೆ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ಅವರಿಗೆ ಹಿರಿಯ ಪ್ರಾಥಮಿಕ ಘಾಗೂ ಪ್ರೌಢಶಾಲಾ ವಿದ್ಯಾಭ್ಯಾಸ ನೀಡಬೇಕಾಗುತ್ತದೆ"
ಗ್ರಾಮಸ್ಥರು ಕೃಷಿ ಹಾಗೂ ಅರಣ್ಯದ ಉಪೌತ್ಪನ್ನಗಳಿಗೆ ಅವಲಂಬಿತರಾಗಿದ್ದಾರೆ. ಪ್ರತೀ ಚುನಾವಣೆಗೆ ಮುನ್ನ ಜನಪ್ರತಿನಿಧಿಗಳು ಈ ಗ್ರಾಮಕ್ಕೆ ರಸ್ತೆ ನಿರ್ಮಿಸುವ ಭರವಸೆ ನೀಡುತ್ತಾರೆ. ಆದರೆ ಒಮೆ ಚುನಾವಣೆ ಮುಗಿದ ನಂತರ ಮರೆತುಬಿಡುತ್ತಾರೆ. ಮಳೆಗಾಲದಲ್ಲಿ ಯುವಕರು ಮಾತ್ರವೇ ಪಟ್ಟಣಗಳಿಗೆ ತೆರಳಬಹುದು. ಇತರರು ಈ ಕಾಡಿನ ದಾರಿಯಲ್ಲಿ ಸಾಗುವುದು ಅಪಾಯಕಾರಿಯಾಗಿದೆ ಎಂದು ಗ್ರಾಮಕ್ಕೆ ಆಗಾಗ ಭೇಟಿ ನೀಡುವ ಹೋಮಿಯೋಪತಿ ವೈದ್ಯರಾಮ ಮುಂಡಾಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com