ಮೈಸೂರು: ಯೋಗಾಸಕ್ತರ ನೆಚ್ಚಿನ ತಾಣ 'ಯೋಗ ಉದ್ಯಾನವನ'

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಸಿದ್ಧತಾ ಕಾರ್ಯಗಳು ಭರದ ಸಾಗುತ್ತಿರುವಂತೆ ಮೈಸೂರಿನ ಉದ್ಯಾನವೊಂದು ಯೋಗಾಸಕ್ತರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.
ಯೋಗ ಅಭ್ಯಸಿಸುವ ಪೆರ್ಗೋಲಸ್
ಯೋಗ ಅಭ್ಯಸಿಸುವ ಪೆರ್ಗೋಲಸ್
ಮೈಸೂರು: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಸಿದ್ಧತಾ ಕಾರ್ಯಗಳು ಭರದ ಸಾಗುತ್ತಿರುವಂತೆ ಮೈಸೂರಿನ ಉದ್ಯಾನವೊಂದು ಯೋಗಾಸಕ್ತರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.  
ರಾಮಕೃಷ್ಣನಗರದ  ಇ ಮತ್ತು ಎಫ್ ಬ್ಲಾಕ್ ನಲ್ಲಿರುವ ಈ ಉದ್ಯಾನವನವನ್ನು ಯೋಗ ಉದ್ಯಾನವನ ಅಥವಾ ಯೋಗ ಪಾರ್ಕ್ ಎಂದು ಕರೆಯಲಾಗುತ್ತದೆ .ಈ ಪಾರ್ಕಿನಲ್ಲಿ ಯೋಗಾಭ್ಯಾಸವನ್ನು ಉತ್ತೇಜಿಸಲಾಗುತ್ತಿದೆ ಎಂಬುದು ಇದರರ್ಥ. 12 ವರ್ಷಗಳಿಂದಲೂ ಅಸಂಖ್ಯಾತ ಯೋಗ ಆಸಕ್ತರು ರೂಪುಗೊಂಡಿದ್ದಾರೆ. 
ಯೋಗಾಭ್ಯಾಸ ಮಾಡುವವರು ಉಚಿತವಾಗಿ ತರಬೇತಿ ಪಡೆಯುವುದು ಈ ಪಾರ್ಕಿನಲ್ಲಿ ಸರ್ವೇಸಾಮಾನ್ಯವಾಗಿರುತ್ತದೆ. ಬೆಳಗಿನ ನಡಿಗೆಯನ್ನು ಮುಗಿಸಿದ ನಂತರ ಎರಡು ಪೆರ್ಗೋಲಸ್ ಗಳಲ್ಲಿ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸುವುದು ಇಲ್ಲಿ ಕಂಡುಬರುತ್ತದೆ. 
ಯೋಗಾಭ್ಯಾಸಕ್ಕೂ ಮುಂಚೆ ವಾಕ್ ಮಾಡುವವರಿಗಾಗಿ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕವಾದ ಸ್ಥಳವಿದೆ. ಅಲ್ಲಿ ಮಕ್ಕಳು ಆಟ ಆಡುತ್ತಾರೆ. ಇಲ್ಲಿನ ಪೆರ್ಗೋಲಸ್ ಗಳಿಂದ ಸ್ಪೋರ್ತಿಗೊಂಡು ಇತರ ಉದ್ಯಾನವನಗಳಲ್ಲಿಯೂ ಯೋಗಾಸಕ್ತರಿಗಾಗಿ ಪೆಗೋರ್ಲಸ್ ಗಳನ್ನು ನಿರ್ಮಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com