ಕೊಡಗು: ರಾಜಕೀಯ ಪ್ರಭಾವ, ಕೆಲಸದಿಂದ ವಜಾಗೊಳ್ಳುವ ಭೀತಿಯಲ್ಲಿ ಅರಣ್ಯಾಧಿಕಾರಿಗಳು

ವಿರಾಜಪೇಟೆ ವಲಯದ ಅರಣ್ಯಾಧಿಕಾರಿಗಳು ತಮ್ಮಗೆ ವಹಿಸಿರುವ ಡ್ಯೂಟಿ ಮಾಡಿ ಇದೀಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಆಸ್ತಿ ಮಾಲೀಕ ನಿರ್ಮಿಸುತ್ತಿದ್ದ ರಸ್ತೆ
ಆಸ್ತಿ ಮಾಲೀಕ ನಿರ್ಮಿಸುತ್ತಿದ್ದ ರಸ್ತೆ
ಕೊಡಗು: ವಿರಾಜಪೇಟೆ ವಲಯದ ಅರಣ್ಯಾಧಿಕಾರಿಗಳು ತಮ್ಮಗೆ ವಹಿಸಿರುವ ಡ್ಯೂಟಿ ಮಾಡಿ ಇದೀಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 
ಮಕುಟಾ ವಲಯದ ಆಸ್ತಿಯ ಮಾಲೀಕರೊಬ್ಬರ ಮೇಲೆ ಪ್ರಕರಣ ದಾಖಲಿಸಿದ ಎಸಿಎಫ್ ಹಾಗೂ ರೆಂಜರ್ ಅವರನ್ನೊಳಗೊಂಡ ತಂಡ ಅಪರಾಧಕ್ಕಾಗಿ ಬಳಸಿದ ಜೆಸಿಬಿ ಯಂತ್ರವೊಂದನ್ನು ವಶಪಡಿಸಿಕೊಂಡಿತ್ತು. 
ಜನವರಿ 2019ರಂದು ದಾಖಲಾಗಿರುವ ದೂರಿನಂತೆ ಯಾವುದೇ ರಸ್ತೆ ಮಾಡುವುದಕ್ಕೆ ವಿನಾಯಿತಿ ಇಲ್ಲದಿದ್ದರೂ  ಆ ಮಾಲೀಕ ತನ್ನ ಆಸ್ತಿ ಇರುವವರೆಗೂ ಹೊಸದಾಗಿ ರಸ್ತೆ ನಿರ್ಮಿಸುತ್ತಿದ್ದ. ಇದಕ್ಕೆ  ಸ್ಥಳೀಯ ಅರಣ್ಯಾಧಿಕಾರಿಗಳಿಂದ ವಿರೋಧ ವ್ಯಕ್ತವಾಗಿತ್ತು.
ಆದರೆ, ಈಗ ಆ ಆಸ್ತಿ ಮಾಲೀಕ  ಕೆಲ ರಾಜಕೀಯ ಮುಖಂಡರ ಪ್ರಭಾವದಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಆ ವಲಯದ ಕೆಲ ಆಯ್ದ ಅಧಿಕಾರಿಗಳ ವರ್ಗಾವಣೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎದು ಕೊಡಗು ಜಿಲ್ಲೆಯ ಪರಿಸರ ಹೋರಾಟಗಾರರೊಬ್ಬರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರೊಬ್ಬರು ಅರಣ್ಯ ಸಚಿವ ಸತೀಶ್ ಜಾರಕಿಹೊಳಿಗೆ ಪತ್ರ ಬರೆದು ವಿರಾಜಪೇಟೆ ವಲಯದಲ್ಲಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾ ಮಾಡುವಂತೆ ಒತ್ತಡ ಹಾಕಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ತಮ್ಮ ಕೆಲಸ ಮಾಡಿದ್ದಕ್ಕೆ ಅರಣ್ಯಾಧಿಕಾರಿಗಳಿಗೆ  ಶಿಕ್ಷೆ ಹಾಗೂ ಕಾನೂನು ಉಲ್ಲಂಘಿಸುವವರನ್ನು ರಕ್ಷಿಸುವಲ್ಲಿ ರಾಜಕೀಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 
ಮಲನಾಡು ಜಿಲ್ಲೆಯಲ್ಲಿ ಅವರು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ್ದು, ಅಲ್ಲಿಗೆ ಹೋಗಲು ಸರಿಯಾದ ರಸ್ತೆಗಳಿಲ್ಲ. ಆದಕ್ಕಾಗಿ ಪ್ರಭಾವ ಬಳಸಿ ರಸ್ತೆ ನಿರ್ಮಿಸಲು ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದು ಪರಿಸರ ಪ್ರೇಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com