ಹಾಸನ: ಗಣಿತದ ಲೆಕ್ಕ ಮಾಡದ ಪ್ರಾಥಮಿಕ ಶಾಲೆ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ

ಗಣಿತದ ಸಮಸ್ಯೆ ಪರಿಹರಿಸದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಬೆತ್ತದಿಂದ ಥಳಿಸಿರುವ ಘಟನೆ ಹೊಳೆನರಸೀಪುರ ತಾಲೂಕಿನ ಉದ್ದೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿನ್ನೆ ನಡೆದಿದೆ.

Published: 11th June 2019 12:00 PM  |   Last Updated: 11th June 2019 11:53 AM   |  A+A-


Injured Student Bharat kumar

ಗಾಯಗೊಂಡ ವಿದ್ಯಾರ್ಥಿಯ ಬೆನ್ನುಭಾಗ

Posted By : ABN ABN
Source : The New Indian Express
ಹಾಸನ: ಗಣಿತದ ಸಮಸ್ಯೆ ಪರಿಹರಿಸದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಬೆತ್ತದಿಂದ ಥಳಿಸಿರುವ ಘಟನೆ ಹೊಳೆನರಸೀಪುರ ತಾಲೂಕಿನ ಉದ್ದೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿನ್ನೆ ನಡೆದಿದೆ.

ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್ ಕುಮಾರ್ ಎಂಬ ವಿದ್ಯಾರ್ಥಿಗೆ ವಿಶ್ವನಾಥ್ ಎಂಬ ಶಿಕ್ಷಕ ಬೆತ್ತದಿಂದ ಥಳಿಸಿದ್ದಾನೆ. ಇದರಿಂದಾಗಿ ವಿದ್ಯಾರ್ಥಿಯ ಬೆನ್ನುಭಾಗ, ಕೈಗಳು ಹಾಗೂ ಬಲ ಗಾಲಿಗೆ ತೀವ್ರ ಗಾಯಗಳಾಗಿವೆ. ಅಲ್ಲದೇ ಭರತ್ ನನ್ನು ಅವಾಚ್ಯ ಶಬ್ದಗಳಿಂದ ಶಿಕ್ಷಕ ನಿಂಧಿಸಿದ್ದಾನೆ ಎನ್ನಲಾಗಿದೆ. 

ಶಿಕ್ಷಕ ತನ್ನ ಮಗನ ಮೇಲೆ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಂಗಪ್ಪ ಬಿಇಒಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ನಂತರ ಭರತ್ ಕುಮಾರ್ ಜ್ವರದಿಂದ ಬಳಲುತ್ತಿದ್ದು, ಶಾಲೆಗೆ ಹೋಗಲ್ಲ ಎನ್ನುತ್ತಿದ್ದಾನೆ ಎಂದು ಸಂಗಪ್ಪ ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp