ಕೊಪ್ಪಳ: ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು, ನೇಣಿಗೆ ಶರಣಾದ ಪತಿಯ ಕಣ್ಣೀರು!

ಸುಖ ಸಂಸಾರದ ಕನಸು ಹೊತ್ತು ಮದುವೆಯಾಗಿದ್ದ ವ್ಯಕ್ತಿಯೊರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

Published: 12th June 2019 12:00 PM  |   Last Updated: 12th June 2019 06:35 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಕೊಪ್ಪಳ: ಸುಖ ಸಂಸಾರದ ಕನಸು ಹೊತ್ತು ಮದುವೆಯಾಗಿದ್ದ ವ್ಯಕ್ತಿಯೊರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ದೊಡ್ಡಬಸವರಾಜ್ ಅಗಸಿಮುಂದಿನ್ ಎಂಬಾತ ಡೆತ್ ನೋಟ್ ಬರೆದಿಟ್ಟು ಇಂದು ಬೆಳಿಗ್ಗೆ ನೇಣಿ ಬಿಗದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಪತ್ನಿ ಶಿಲ್ಪಾ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪತಿ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ದೂರಿನ ನಂತರ ಪಿಎಸ್ಐ ಅಮರೇಶ್ ಕಿರುಕುಳ ನೀಡಿದ್ದು ಈ ಕಾರಣದಿಂದ ಮನನೊಂದು ದೊಡ್ಡಬಸವರಾಜ್, ಪತ್ನಿ ಮತ್ತು ಪೊಲೀಸ್ ಅಧಿಕಾರಿ ವಿರುದ್ಧ ಮೂರು ಪುಟದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿ ಮತ್ತೊಮ್ಮೆ ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು ಎಂದು ಬರೆದಿದ್ದಾನೆ. ಇನ್ನು ದೊಡ್ಡಬಸವರಾಜ್ ಅವರ ಮೃತದೇಹವನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಮುಂದಿಟ್ಟು ಸಂಬಂಧಿಕರು ಕೂಡಲೇ ತಪ್ಪಿತಸ್ಥರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp