ಸಚಿವ ತಮ್ಮಣ್ಣ ಎದುರೇ ಐಎಎಸ್ ಅಧಿಕಾರಿಗೆ ಆಯನೂರು ಮಂಜುನಾಥ್ ಆವಾಜ್: ಪಾಲಿಕೆ ಆಯುಕ್ತೆ ತಿರುಗೇಟು!

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಕಮಿಷನರ್ ನಡುವೆ ಮಾತಿನ ಚಕಮಕಿ ನಡೆದಿದೆ....

Published: 12th June 2019 12:00 PM  |   Last Updated: 12th June 2019 11:50 AM   |  A+A-


IAS officer, Shivamogga MLC have an ugly spat

ಐಎಎಸ್ ಅಧಿಕಾರಿ- ಆಯನೂರು ಮಂಜುನಾಥ್ ನಡುವೆ ಮಾತಿನ ಚಕಮಕಿ

Posted By : SD SD
Source : The New Indian Express
ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಕಮಿಷನರ್ ನಡುವೆ ಮಾತಿನ ಚಕಮಕಿ ನಡೆದಿದೆ.

ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ಗೆ ಎಂಎಲ್‍ಸಿ ಆಯನೂರು ಮಂಜುನಾಥ್ ಅವರು ಏಕ ವಚನದಲ್ಲಿ ಗದರಿದ್ದಾರೆ. ಇದಕ್ಕೆ ಪ್ರತಿಯಾಗಿ, ನೀವು ಏಕವಚನದಲ್ಲಿ ಮಾತನಾಡಬಾರದು, ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳುವುದನ್ನು ಕಲಿಯಿರಿ ಎಂದು ಆಯನೂರು ಅವರಿಗೆ ಮಹಿಳಾ ಕಮಿಷನರ್ ತಿರುಗೇಟು ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಎದುರೇ ಈ ಜಟಾಪಟಿ ನಡೆದಿದೆ. ಯಾವ ಕಾಮಗಾರಿ ನೋಡಿದರೂ ಆಗುತ್ತಿದೆ ಎಂದು ಹೇಳುತ್ತಿದ್ದೀರಿ. ಲೈಟ್ ಇಲ್ಲದೆ ಜನ ಕತ್ತಲಲ್ಲಿ ಇದ್ದಾರೆ. ಒಂದು ದಿನ ಅಲ್ಲಿ ಇದ್ದು ನೋಡಿ. ಜನರ ಸಮಸ್ಯೆ ಕೇಳುವವರಿಲ್ಲ. ಜನರು ಸಾಯಬೇಕಾ, ಜನರ ಸಮಸ್ಯೆ ನಿನ್ನ ಬಳಿ ಹೇಳಬಾರದಾ ಎಂದು ಮಂಜುನಾಥ್ ಗದರಿದ್ದಾರೆ. ಅಲ್ಲದೆ ಏನಮ್ಮ ನಿಮಗೆ ಮರ್ಯಾದೆ ಬೇಕು. ಅಲ್ಲಿ ಜನ ಸಾಯಬೇಕು ಅಲ್ವಾ. ನೀವು ಆಯುಕ್ತೆ ನಿನಗೆ ಹೇಗೆ ಹೇಳಬೇಕಮ್ಮ ಎಂದು ಕಿಡಿಕಾರಿದ್ದಾರೆ.

ಈ ವೇಳೆ ತಿರುಗೇಟು ನೀಡಿದ ಆಯುಕ್ತೆ ಚಾರುಲತಾ, ನೀವು ಹೀಗೆ ಏಕವಚನದಲ್ಲಿ ಮಾತನಾಡಬಾರದು. ಸರಿಯಾಗಿ ಮಾತನಾಡಿ, ನಾವು ನಿಮಗೆ ಗೌರವ ನೀಡುತ್ತಿದ್ದೇನೆ ಎಂದು ಹೇಳಿ ನಿಮ್ಮ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಕಮಿಷನರ್ ಕೂಡ ಸಿಡಿಮಿಡಿಗೊಂಡಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp