ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬಂದು ಹಣ ವಾಪಸ್ ಕೊಡಿ: ಐಎಂಎ ಮಾಲೀಕನಿಗೆ ಸಚಿವ ಜಮೀರ್ ಅಹ್ಮದ್ ಕರೆ

ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬನ್ನಿ ಬಡವರ ಹಣ ನೀಡಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಐಎಂಎ ಜುವೆಲ್ಸ್ ಸಂಸ್ಥೆಯ...

Published: 12th June 2019 12:00 PM  |   Last Updated: 12th June 2019 02:06 AM   |  A+A-


ZameerAhmed Khans message to IMA Jewels founder-owner Mansoor Khan

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬನ್ನಿ ಬಡವರ ಹಣ ನೀಡಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಐಎಂಎ ಜುವೆಲ್ಸ್ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಗೆ ಹೇಳಿದ್ದಾರೆ.

ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿ ನಾಪತ್ತೆಯಾಗಿರುವ ಐಎಂಎ ಜುವೆಲ್ಸ್ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಕುರಿತಂತೆ ಮಾತನಾಡಿರುವ ಜಮೀರ್ ಅಹ್ಮದ್ ಖಾನ್, 'ಈಗ ಆಗಿರುವುಗುದು ಆಗಿಹೋಗಿದೆ. ಆದರೆ ದಯವಿಟ್ಟು ನೀವು ತಲೆ ಮರೆಸಿಕೊಳ್ಳುವ ಅಗತ್ಯವಿಲ್ಲ. ಧೈರ್ಯವಾಗಿ ಮುಂದೆ ಬನ್ನಿ, ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಸಂಸ್ಥೆ ಕಾನೂನು ಬದ್ದವಾಗಿದ್ದರೆ, ಬನ್ನಿ ಬಡವರ ಹಣ ನೀಡಿ. ನಮಗೆ ನಾವು ಬೆಂಬಲ ನೀಡುತ್ತೆವೆ ಎಂದು ಹೇಳಿದ್ದಾರೆ.

ಅಂತೆಯೇ ಮನ್ಸೂರ್ ಖಾನ್ ಅವರ ಆಡಿಯೋ ಟೇಪ್ ಕುರಿತಂತೆ ಮಾತನಾಡಿರುವ ಜಮೀರ್, ನೀವು ರಾಜಕಾರಣಗಳಿಗೆ ಹಣ ನೀಡಿದ್ದೇನೆ ಎಂದು ಹೇಳಿದ್ದೀರಿ. ಆದರೆ ರಾಜಕಾರಣಗಳಿಗೇಕೆ ಹಣ ನೀಡಬೇಕು, ಬಡವರ ಹಣವನ್ನು ನೀವೇಕೆ ರಾಜಕಾರಣಗಳಿಗೆ ನೀಡಿದ್ದೀರಿ. ನಿಮ್ಮ ಸಂಸ್ಥೆ ಕಾನೂನು ಬಾಹಿರವಾಗಿಲ್ಲವೆಂದರೆ ನೀವೇಕೆ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಇತ್ತೀಚಿಗೆ ಆಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ತಾವು ಶಿವಾಜಿನಗರದ ಸ್ಥಳೀಯ ಶಾಸಕ ಸೇರಿದಂತೆ ಹತ್ತಾರು ಅಧಿಕಾರಿಗಳಿಗೆ ಹಣ ನೀಡಿದ್ದೇನೆ ಎಂದು ಹೇಳಿದ್ದರು.
Stay up to date on all the latest ರಾಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp