ಬೆಳಗಾವಿಯ ಬಿ.ಕಾಂ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ 100ಕ್ಕೆ 101 ಅಂಕ!

ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳು ಬರುವುದು ಕಷ್ಟವಾಗಿರುವಾಗ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ...
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ಬೆಳಗಾವಿ: ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳು ಬರುವುದು ಕಷ್ಟವಾಗಿರುವಾಗ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೆ ಎ ಲೋಕಾಪುರ್ ಕಾಲೇಜಿನ 6ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಬಿ.ಕಾಂ ವಿದ್ಯಾರ್ಥಿ ಮಾಡರ್ನ್ ಆಡಿಟಿಂಗ್ ಅಂಡ್ ಪ್ರಾಕ್ಟೀಸಸ್ ನಲ್ಲಿ 100ಕ್ಕೆ 101 ಅಂಕ ಗಳಿಸಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಇವರಿಗೆ ಮೌಲ್ಯಮಾಪನ ಮಾಡಿ 101 ಅಂಕ ನೀಡಿದ್ದು ಮಾತ್ರವಲ್ಲದೆ ಆಕೆಯ ಅಂಕಪಟ್ಟಿಯನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಫಲಿತಾಂಶ ಘೋಷಿಸಿದಾಗ ತನಗೆ 100ಕ್ಕೆ 101 ಅಂಕ ಬಂದಿದ್ದು ನೋಡಿ ಶೈಲಶ್ರೀ ಸನ್ವಗನ್ವಗೆ ಅಚ್ಚರಿಯಾಗಿತ್ತು. 6ನೇ ಸೆಮಿಸ್ಟರ್ ನಲ್ಲಿ ಆಕೆಗೆ ಒಟ್ಟಾರೆ ಶೇಕಡಾ 70ರಷ್ಟು ಅಂಕ ಬಂದಿತ್ತು. ಒಟ್ಟು 4,400ರಲ್ಲಿ 2,465 ಅಂಕ ಗಳಿಸಿದ್ದಳು. ಆದರೆ ಒಂದು ಸಬ್ಜೆಕ್ಟ್ ನಲ್ಲಿ 100ಕ್ಕೆ 101 ಅಂಕ ಬಂದಾಗ ಆಕೆಯ ಪೋಷಕರು ಕಾಲೇಜಿನ ಪ್ರಾಂಶುಪಾಲರಿಗೆ ತೋರಿಸಿದ್ದಾರೆ.
ತಮ್ಮ ತಪ್ಪು ಅರಿವಿಗೆ ಬಂದ ಕೂಡಲೇ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ತಕ್ಷಣವೇ ಆಕೆಯ ಅಂಕಪಟ್ಟಿಯನ್ನು ಆನ್ ಲೈನ್ ನಿಂದ ತೆಗೆದಿದ್ದಾರೆ. ಆದರೆ ನಂತರ ಎಷ್ಟು ಅಂಕ ಬಂದಿದೆ ಎಂದು ತೋರಿಸಿಲ್ಲ. ಶೈಲಶ್ರೀ ಮತ್ತೆ ಅಂಕಪಟ್ಟಿಯನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಲು ನೋಡಿದಾಗ ಸಾಧ್ಯವಾಗಲಿಲ್ಲ. ಆ ಸಬ್ಜೆಕ್ಟ್ ನಲ್ಲಿ ಆಕೆಯ ನಿಜವಾದ ಅಂಕಗಳೆಷ್ಟು ಎಂದು ಗೊತ್ತಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com