ಬೆಂಗಳೂರಿನಲ್ಲಿ ಇನ್ನೊಬ್ಬ ವಂಚಕ ಅರೆಸ್ಟ್! ಇಂಜಾಝ್ ಬಿಲ್ಡರ್ಸ್ ನಿರ್ದೇಶಕ ಸಿಸಿಬಿ ಪೋಲೀಸರ ಬಲೆಗೆ

ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ

Published: 13th June 2019 12:00 PM  |   Last Updated: 13th June 2019 12:52 PM   |  A+A-


Misbah Mukkhram

ಮಿಸ್ಬಾ ಮುಕರ್ರಮ್

Posted By : RHN RHN
Source : The New Indian Express
ಬೆಂಗಳೂರು: ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಮತ್ತು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

ಇನ್ನೊಂದೆಡೆ ಹೊಸದಾಗಿ ರೂಪುಗೊಂಡ  ಎಸ್ ಐಟಿ ತಂಡ ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಹುಡುಕುತ್ತಿದೆ. "ಇನ್ಸ್ ಪೆಕ್ಟರ್ ಯತಿರಾಜ್ ನೇತೃತ್ವದ ಸಿಸಿಬಿ ತಂಡ ಕಳೆದ ರಾತ್ರಿ ಮುಕರ್ರಮ್ ನನ್ನು ಬಂಧಿಸಿದೆ. ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆತ ಹಲವಾರು ಜನರಿಗೆ  ಹಲಾಲ್ ಹಣದ ಹೆಸರಿನಲ್ಲಿ ವಂಚಿಸಿದ್ದನು ಎಂದು ಆರೋಪ ಕೇಳಿಬಂದಿದೆ." ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಅಪರಾಧ ದಳ) ಅಲೋಕ್ ಕುಮಾರ್ ಹೇಳಿದ್ದಾರೆ.

ಮುಕರ್ರಮ್ ತಾನು ಚೈನ್ ಲಿಂಕ್ ತರಹದ ಬಹು-ಮಟ್ಟದ ವ್ಯಾಪಾರೋದ್ಯಮ ನಡೆಸುತ್ತಿದ್ದನೆಂದು  ವರದಿಯಾಗಿದೆ. 'ಹಲಾಲ್ ಹೂಡಿಕೆಗಳ' ಹೆಸರಿನಲ್ಲಿ ಕಂಪನಿಯು ತನ್ನ ಹೂಡಿಕೆದಾರರಿಗೆ ದೊಡ್ಡ ಲಾಭದ ಭರವಸೆ ನೀಡಿತ್ತು. ಆ ಮೂಲಕ ಕಂಪನಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಮತ್ತು ಹೆಚ್ಚಿನ ಹೂಡಿಕೆದಾರರನ್ನು ಕರೆತರಲು ಪ್ರೋತ್ಸಾಹಿಸಿತ್ತು.

2017ರಲ್ಲಿ ಐಟಿ ದಾಳಿ ಸಹ ಈ ಸಂಸ್ಥೆ ಮೇಲೆ ನಡೆದಿದ್ದು ಇಂಜಾಝ್ ಬಿಲ್ಡರ್ಸ್ ಗೆ ಸೇರಿದ್ದ  ಸುಮಾರು 3,500 ಬ್ಯಾಂಕ್ ಖಾತೆಗಳನ್ನು ಅವರು ಪತ್ತೆ ಮಾಡಿದ್ದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp