ಐಎಂಎ ವಂಚನೆ ಪ್ರಕರಣ: 2 ದಿನದಲ್ಲಿ 20 ಸಾವಿರ ದೂರು ದಾಖಲು, ಇನ್ನೂ ಕಡಿಮೆಯಾಗಿಲ್ಲ ದೂರುದಾರರ ಸರತಿ ಸಾಲು!

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಪೊಲೀಸರ ದೂರು ಸ್ವೀಕಾರ ಪ್ರಕ್ರಿಯೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ವರೆಗೂ ಬರೊಬ್ಬರಿ 20 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಎಸ್ ಕನ್ವೆಷನ್ ಹಾಲ್ ನಲ್ಲಿ 3ನೇ ದಿನವೂ ದೂರು ಸ್ವೀಕರಣೆ
ಎಎಸ್ ಕನ್ವೆಷನ್ ಹಾಲ್ ನಲ್ಲಿ 3ನೇ ದಿನವೂ ದೂರು ಸ್ವೀಕರಣೆ
ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಪೊಲೀಸರ ದೂರು ಸ್ವೀಕಾರ ಪ್ರಕ್ರಿಯೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ವರೆಗೂ ಬರೊಬ್ಬರಿ 20 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
20 ಸಾವಿರಕ್ಕೂ ಹೆ್ಚ್ಚು ದೂರು ಸಲ್ಲಿಕೆಯಾದ ಬಳಿಕವೂ ಹಣ ಕಳೆದುಕೊಂಡಿರುವ ನೂರಾರು ಹೂಡಿಕೆದಾರರು ದೂರು ನೀಡಲು ಮುಂದಾಗುತ್ತಿದ್ದಾರೆ. ಶಿವಾಜಿನಗರದ ಎಎಸ್ ಕನ್ವೆಷನ್ ಹಾಲ್ ನಲ್ಲಿ 3ನೇ ದಿನವೂ ದೂರು ಸ್ವೀಕರಣೆ ಮುಂದುವರೆದಿದ್ದು, ಇಂದೂ ಕೂಡ ನೂರಾರು ಮಂದಿ ಸರತಿ ಸಾಲಲ್ಲಿ ನಿಂತು ದೂರು ಸಲ್ಲಿಕೆಗೆ ಮುಂದಾಗಿದ್ದಾರೆ. ನೆರೆಯ ರಾಜ್ಯಗಳು ಹಾಗೂ ಹೊರ ದೇಶಗಳವರೂ ಕಂಪನಿಯಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದು, ಅವರೆಲ್ಲ ಕುಟುಂಬ ಸಮೇತವಾಗಿ ನಗರಕ್ಕೆ ಬಂದು ದೂರು ನೀಡುತ್ತಿದ್ದಾರೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ–ಹೀಗೆ ಹಲವು ಉದ್ದೇಶಕ್ಕಾಗಿ ಹಣ ಹೂಡಿಕೆ ಮಾಡಿದ್ದ ಜನ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರು, ಪ್ರಕರಣದಲ್ಲಿ ಎಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ ಎಂಬ ಅಂದಾಜೇ ಸಿಗುತ್ತಿಲ್ಲ. ಈಗಲೂ ಸಾವಿರಾರು ಮಂದಿ ದೂರು ನೀಡಲು ಸರತಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಅಲ್ಲದೆ ನೆರೆ ರಾಜ್ಯಗಳಿಂದಲೂ ಜನ ಆಗಮಿಸುತ್ತಿದ್ದು, ದೂರು ನೀಡಲು ಮುಂದಾಗಿದ್ದಾರೆ. ದೂರು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಗರಣದ ಗಾತ್ರದ ಬಗ್ಗೆ ತಿಳಿಯಲಿದೆ ಎಂದು ಹೇಳಿದ್ದಾರೆ.
ಅಂತೆಯೇ ವಂಚನೆ ಪ್ರಕರಣ ಸಂಬಂಧ ಐಎಂಎ ಸಂಸ್ಥೆಯ ದಾಖಲೆಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಶೀಘ್ರ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com