ಚಿತ್ರದುರ್ಗ: ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ, ಪತಿ ಸಾವು, ಪತ್ನಿ ಗಂಭೀರ

ಲೈಂಗಿಕ ಕಿರುಕುಳದಿಂದ ಬೇಸತ್ತ ದಂಪತಿಗಳು ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದಾಗ ಪತಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.

Published: 14th June 2019 12:00 PM  |   Last Updated: 14th June 2019 06:29 AM   |  A+A-


Chitradurga: Husband died when couple attempts to subside after video recorded

ಚಿತ್ರದುರ್ಗ: ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ, ಪತಿ ಸಾವು,ಪತ್ನಿ ಗಂಭೀರ

Posted By : RHN RHN
Source : Online Desk
ಚಿತ್ರದುರ್ಗ: ಲೈಂಗಿಕ ಕಿರುಕುಳದಿಂದ ಬೇಸತ್ತ ದಂಪತಿಗಳು ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದಾಗ ಪತಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗದ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪತಿ ಮೈಲಾರಪ್ಪ (40) ಸಾವನ್ನಪ್ಪಿದ್ದರೆ ಪತ್ನಿ ಸರೋಜಮ್ಮ (35) ಸ್ಥಿತಿ ಚಿಂತಾಜನಕವಾಗಿದೆ.

ಹೊಸದುರ್ಗದ ಕೋದಂಡಾಪುರ ಮೂಲದವರಾದ ಈ ದಂಪತಿಗುರುವಾರ ಸಂಜೆ ತಾವು ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಪೋಲೀಸರು ದಂಪತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿ ವೇಳೆಯಾಗಿದ್ದು ದಂಪತಿಯನ್ನು ಪತ್ತೆ ಮಾಡಲಾಗಲಿಲ್ಲ.

ಇತ್ತ ದಂಪತಿ ವೀಡಿಯೋ ಹರಿಬಿಟ್ತ ನಂತರ ತಾಲೂಕಿನ ತೊಣಚೇನಹಳ್ಳಿ ಬಳಿ ದೇವಾಲಯವೊಂದರ ಸಮೀಪ ನೇಣು ಬಿಗಿದುಕೊಂಡಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರು ಈ ದೃಶ್ಯ ಕಂಡು ಪೋಲೀಸರಿಗೆ ತಿಳಿಸುವಷ್ತರಲ್ಲಿ ಪತಿ ಮೈಲಾರಪ್ಪ ಸಾವನ್ನಪ್ಪಿದ್ದಾನೆ. ಪತ್ನಿ ಸರೋಜಮ್ಮನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ವೀಡಿಯೋ ವಿವರ

ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿದ್ದ ಮೈಲಾರಪ್ಪ 13 ವರ್ಷ ಕೆಳಗೆ ಸರೋಜಮ್ಮನನ್ನು ವಿವಾಹವಾಗಿದ್ದ. ನಮ್ಮ ಗ್ರಾಮದವನೇ ಆದ ವಿನಯ್ ಎಂಬಾತ ನನ್ನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ನನ್ನ ಪತ್ನಿ ಅದಕ್ಕೆ ಸ್ಪಂದಿಸಿಲ್ಲ, ನಾನು ಪೋಲೀಸರಿಗೆ ದೂರು ಕೊಡಲು ಹೋದರೂ ಆತ ಪೋಲೀಸ್ ಅಧಿಕಾರಿಯ ಸಂಬಂಧಿಯಾಗಿದ್ದ ಕಾರಣ ಅವರೂ ದೂರು ಸ್ವೀಕರಿಸಲಿಲ್ಲ. ಇದರಿಂದ ಬೇಸತ್ತು ನಾವಿಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ. ನಮಗಾದ ಗತಿ ಯಾರಿಗೂ ಬರುವುದು ಬೇಡ ಈಂದು ಮೈಲಾರಪ್ಪ ವೀಡಿಯೋದಲ್ಲಿ ಉಲ್ಲೇಖಿಸಿದ್ದಾನೆ. ವಿನಯ್ ನನ್ನ ಬಗ್ಗೆ ಗ್ರಾಮದಲ್ಲೆಲ್ಲಾ ಅಪಪ್ರಚಾರ ಮಾಡುತ್ತಿದ್ದ ಆದರೆ ನನ್ನ ಪತಿ ನನ್ನ ಮೇಲೆ ಎಂದೂ ಸಂಶಯ ತಾಳಿಲ್ಲ ಎಂದು ಸರೋಜಮ ಸಹ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಘಟನೆ ಕುರಿತು ಶ್ರೀರಾಂಪುರ ಠಾಣೆಯಲ್ಲಿ ದುರು ದಾಕಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp