ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!

ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ನಡೆಸಿದ್ದಾರೆ.
ನಯನೇಗಳಿ ಗ್ರಾಮದ ನಿವಾಸಿ, ಹನಮಪ್ಪ ಹಲ್ವಾರ್  ಜೂನ್ 6 ರಂದು ಬೆಳಗ್ಗೆ ಪೂಜೆ ಸಲ್ಲಿಸಲು ನದಿಗೆ ತೆರಳಿದ್ದರು,  ವೇಳೆ ಮೊಸಳೆಯೊಂದು ಆತನನ್ನು ಹಿಡಿದು ನದಿಯೊಳಗೆ ಎಳೆದೊಯ್ದಿತ್ತು ಎಂದು ಮೂಲಗಳು ತಿಳಿಸಿವೆ. 
ಘಟನೆ ನಡೆದು ಎರಡು ದಿನಗಳ ನಂತರ ಮೃತರ ಕುಟುಂಬಕ್ಕೆ ವಿಷಯ ತಿಳಿಯಿತು. ಹಲ್ವಾರ್ ಅವರ ಚಪ್ಪಲಿ ಮತ್ತು ಬಟ್ಟೆ ನದಿ ದಡದಲ್ಲಿರುವುದನ್ನು  ಗ್ರಾಮಸ್ಥರು ನೋಡಿದ್ದರು, ನಂತರ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದರು. ಈ ವಿಷಯವನ್ನು  ಪೊಲೀಸರಿಗೆ ತಿಳಿಸಿದರು, ನಂತರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರ ಕಾರ್ಯಾಚರಣೆ ವೇಳೆ ಅಪರಿಚಿತ ವ್ಯಕ್ತಿಯ ಶವವೊಂದು ಸಿಕ್ಕಿತು. ಆದರೆ ಹಲ್ವಾರ್ ಶವ ಸಿಕ್ಕಿಲ್ಲ, ಮತ್ತೆ ಎರಡನೇ ದಿನವೂ ಶೋಧ ಕಾರ್ಯ ಮುಂದುವರೆಸಲಾಗಿತು, ಈ ವೇಳೆ ರಕ್ಷಣಾ ತಂಡಕ್ಕೆ ಹಲ್ವಾರ್  ಧರಿಸಿದ್ದ ಬಟ್ಟೆಯ ತುಂಡೊಂದು ಸಿಕ್ಕಿತು. 
ಮತ್ತೆ ಕಾರ್ಯಾಚರಣೆ ಮುಂದುವರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ  ಹೀಗಾಗಿ ಕುಟುಂಬಸ್ಥರ ಅನುಮತಿ ಮೇರೆಗೆ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು. ಹೀಗಾಗಿ ಶವ ಸಿಗದ ಕಾರಣ ಹಲ್ವಾರ್ ಅವರ ಬಟ್ಟೆ ಮತ್ತು ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com