ಐಎಂಎ ಜ್ಯೂವೆಲ್ಲರ್ಸ್ ವಂಚಕ ಮನ್ಸೂರ್ ಜೂನ್ 8ರಂದೇ ದುಬೈಗೆ ಪರಾರಿ: ಪೊಲೀಸರ ಮಾಹಿತಿ

ಸಾವಿರಾರು ಮಂದಿಗೆ ವಂಚಿಸಿರುವ ಐಎಂಎ ಜ್ಯೂವೆಲ್ಲರ್ಸ್ ಮಾಲೀಕ ಮೊಹಮದ್ ಮನ್ಸೂರ್ ಖಾನ್ ಜೂನ್ 8 ರಂದು ರಾತ್ರಿ8.45ಕ್ಕೆ ಎಮಿರೇಟ್ಸ್ ಫ್ಲೈಟ್ ನಲ್ಲಿ ...
ಮೊಹಮದ್ ಮನ್ಸೂರ್ ಖಾನ್
ಮೊಹಮದ್ ಮನ್ಸೂರ್ ಖಾನ್
ಬೆಂಗಳೂರು: ಸಾವಿರಾರು ಮಂದಿಗೆ ವಂಚಿಸಿರುವ ಐಎಂಎ ಜ್ಯೂವೆಲ್ಲರ್ಸ್ ಮಾಲೀಕ ಮೊಹಮದ್ ಮನ್ಸೂರ್ ಖಾನ್ ಜೂನ್ 8 ರಂದು ರಾತ್ರಿ 8.45ಕ್ಕೆ ಎಮಿರೇಟ್ಸ್ ಫ್ಲೈಟ್ ನಲ್ಲಿ ದುಬೈಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ,
ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಸಿಕ್ಕಿದ ಮಾಹಿತಿ ಇದಾಗಿದೆ. ವಾಟ್ಸಾಪ್ ನಲ್ಲಿ  ಮನ್ಸೂರ್ ಖಾನ್ ಆಡಿಯೋ ಕ್ಲಿಪ್ ವೈರಲ್ ಆಗಿತ್ತು, ಶಾಸಕರೊಬ್ಬರು ತನಗೆ 400 ಕೋಟಿ ರು ವಂಚಿಸಿದ್ದಾರೆ, ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಡಿಯೋ ಕ್ಲಿಪ್ ನಲ್ಲಿ ಹೇಳಿದ್ದ. ಇದರಿಂದ ಕೆಲವರು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಊಹಿಸಿದ್ದರು.
ಜೂನ್ 8 ರಾತ್ರಿ 8.45 ಕ್ಕೆ ಮನ್ಸೂರ್ ದೇಶ ಬಿಟ್ಟಿರುವುದನ್ನು ನಮ್ಮ ತನಿಖಾ ತಂಡ ಸಾಬೀತುಪಡಿಸಿದೆ, ನಾವು ಹೆಚ್ಚಿನ ಮಾಹಿತಿ ನೀಡುವ ಆಗಿಲ್ಲ, ಆತ ದೇಶ ಬಿಟ್ಟು ಓಡಿಹೋಗುವ ಮೊದಲು, ಐಎಂಎ ಖಾತೆಯಿಂದ ಮನ್ಸೂರ್ ವಯಕ್ತಿಕ ಖಾತೆಗೆ 19 ಕೋಟಿ ರು. ಹಣ ವರ್ಗಾವಣೆಯಾಗಿದೆ ಎಂಬುದನ್ನು ತನಿಖಾ ತಂಡ ಸ್ಪಷ್ಚಪಡಿಸಿದೆ,.
ಮೊದಲಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಮೊದಲಿಗೆ ದೂರು ದಾಖಲಿಸಿಕೊಂಡಿದ್ದರು, ನಂತರ ವಿಶೇಷ ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಜೊತೆಗೆ ಬಂಧಿತ ಐಎಂಎ ನಿರ್ದೇಶಕರುಗಳನ್ನು ಎಸ್ ಐಟಿ ವಶಕ್ಕೆ ನೀಡಲಾಗಿದೆ,
ಶುಕ್ರವಾರ ಬಂಧಿತ ಐಎಂಎ ನಿರ್ದೇಶಕರುಗಳ ವಿಚಾರಣೆ ನಡೆಯಲಿದೆ. ಇನ್ನೂ ಬಂಧಿತ 7 ನಿರ್ದೇಶಕರು ತಮಗೆ ಮನ್ಸೂರ್  ಹಣ ವರ್ಗಾವಣೆ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ, ಆದರೆ ಕಂಪನಿಯಲ್ಲಿದ್ದ ಚಿನ್ನವನ್ನು ನಗದು ಮಾಡಿಸಿಕೊಡುವಂತೆ ಹೇಳಿದ್ದಾಗಿ, ಅದರಂತೆ ಸುಮಾರು 19 ಕೋಟಿ ರು ಹಣ ಮನ್ಸೂರ್ ಖಾತೆಗೆ ವರ್ಗಾವಣೆಯಾಗಿದೆ,
ಇನ್ನೂ ಬಂಧಿತ 7 ನಿರ್ದೇಶಕರ ಪಾಸ್ ಪೋರ್ಟ್ ಗಳನ್ನು ತನಿಖಾಧಿಕಾರಿಗಳು  ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ಮನ್ಸೂರ್ ಗೆ ಸೇರಿದ ಜಾಗ್ವಾರ್ ಮತ್ತು ರೇಂಜ್ ರೋವರ್ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ, ಇದುವರೆಗೆ ಐಎಂಎ ವಿರುದ್ದ ಸುಮಾರು 27 ಸಾವಿರ ದೂರುಗಳು ದಾಖಲಾಗಿವೆ, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರಿನಿಂದಲೂ ದೂರುಗಳು ದಾಖಲಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com