ಬೆಂಗಳೂರು: ಐಎಂಎ ವಂಚನೆ ಪ್ರಕರಣ, ಆಡಿಟರ್ ಇಕ್ಬಾಲ್ ಖಾನ್ ಎಸ್ಐಟಿ ವಶಕ್ಕೆ

ಐಎಂಎ ಕಂಪನಿಯ ಕೋಟ್ಯಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಆಡಿಟರ್ ಇಕ್ಬಾಲ್ ಖಾನ್ ಅವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು : ಐಎಂಎ ಕಂಪನಿಯ ಕೋಟ್ಯಂತರ ರೂಪಾಯಿ  ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಆಡಿಟರ್ ಇಕ್ಬಾಲ್ ಖಾನ್ ಅವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. 
ಐಎಂಎ ಕಂಪನಿ ಮಾಲೀಕ ಮುಹ್ಮದ್ ಮನ್ಸೂರ್ ಖಾನ್ ಹೂಡಿಕೆದಾರರ ಹಣ ದೋಚಿ ದುಬೈಗೆ ಪರಾರಿಯಾಗಿದ್ದಾರೆಂದು ತಿಳಿದು ಬಂದಿದ್ದು, ಕಂಪನಿಯ ಆಡಿಟ್ ವ್ಯವಹಾರಗಳನ್ನು ಇಕ್ಬಾಲ್ ಖಾನ್ ನೋಡಿಕೊಳ್ಳುತ್ತಿದ್ದರು. 
ಕಂಪನಿಯ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಇಕ್ಬಾಲ್ ಖಾನ್ ನಾಪತ್ತೆಯಾಗಿದ್ದ. ಗುರುವಾರ ತಡರಾತ್ರಿ ಫ್ರೇಜರ್ ಟೌನ್ ನ ನಿವಾಸದಲ್ಲಿ ಇಕ್ಬಾಲ್ ಖಾನ್ ಅವರನ್ನು ವಶಕ್ಕೆ ಪಡೆಯಲಾಗಿದೆ. 
ಬುಧವಾರವಷ್ಟೇ ಸಂಸ್ಥೆಯ ಏಳು ಜನ ನಿರ್ದೇಶಕರಾದ ನಿಜಾಮುದ್ದೀನ್ ಖಾನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಷದ್ ಖಾನ್, ವಾಸಿಂ, ಅನ್ಸರ್ ಪಾಷಾ ಮತ್ತು ದಾದಾ ಪೀರ್ ಅವರನ್ನು ಕರ್ಮಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದರು.ಗುರುವಾರ ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com