ಐಎಂಎ ಜ್ಯುವೆಲ್ಸ್ ವಂಚನೆ: 8 ಲಕ್ಷ ರೂ. ಹೂಡಿಕೆ ಮಾಡಿದ್ದ ಬೀದಿ ವ್ಯಾಪಾರಿ ಆಘಾತದಿಂದ ಸಾವು

ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದು ಅದರ ಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ...
ಐಎಂಎ ಜ್ಯುವೆಲ್ಸ್ ಶಿವಾಜಿನಗರ ಶೋರೂಂ ಹೊರಗೆ ನಿಂತಿರುವ ಹೂಡಿಕೆದಾರರು
ಐಎಂಎ ಜ್ಯುವೆಲ್ಸ್ ಶಿವಾಜಿನಗರ ಶೋರೂಂ ಹೊರಗೆ ನಿಂತಿರುವ ಹೂಡಿಕೆದಾರರು
ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದು ಅದರ ಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ಗೊತ್ತಾಗಿ ತಾನು ಹೂಡಿಕೆ ಮಾಡಿದ್ದ ಹಣ ಕೈತಪ್ಪಿ ಹೋಯಿತು ಎಂದು ಆಘಾತದಿಂದ 8 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ ಅಫ್ಜಲ್ ಪಾಶಾ ಎಂಬ 54 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 
ಹೃದಯಾಘಾತಕ್ಕೀಡಾದ ಅಫ್ಜಲ್ ಪಾಶಾ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಅಸುನೀಗಿದ್ದಾರೆ. 
ಕಮರ್ಷಿಯಲ್ ಸ್ಟ್ರೀಟ್ ಬಳಿ ಬೀದಿ ವ್ಯಾಪಾರಿಯಾಗಿದ್ದ ಅಫ್ಜಲ್ ಪಾಶಾ ತನ್ನ ಕುಟುಂಬದವರಿಗಾಗಿ ಐಎಂಎ ಜ್ಯುವೆಲ್ಸ್ ನಲ್ಲಿ ಹಣ ಹೂಡಿಕೆ ಮಾಡಿದ್ದರು. ಮೈಸೂರು ರಸ್ತೆಯಲ್ಲಿರುವ ಹೊಸಗುಡ್ಡದಹಳ್ಳಿ ಬಳಿ ಇವರ ಕುಟುಂಬ ನೆಲೆಸಿದೆ. 
ನಿನ್ನೆ ಪೀಣ್ಯದ ತಮ್ಮ ಸಂಬಂಧಿಕರ ನಿವಾಸಕ್ಕೆ ಬಂದಿದ್ದ ಪಾಶಾ ಅವರು ಸಂಬಂಧಿಕರಲ್ಲಿ ಹಣ ಹೂಡಿಕೆ ಮಾಡಿದ್ದ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಅಲ್ಲಿಯೇ ಕುಸಿದುಬಿದ್ದರು. ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಾಶಾ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಹಾಗೂ ತನ್ನ ಹೆಸರಿನಲ್ಲಿ ತಲಾ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಕಳೆದ ಜನವರಿಯಲ್ಲಿ ಅದು ವಾಪಸ್ ಬರಬೇಕಾಗಿತ್ತು. ಆದರೆ ಸ್ವಲ್ಪ ಸಮಯ ಕಾಯುವಂತೆ ಕಂಪೆನಿ ಉದ್ಯೋಗಿಗಳು ಹೇಳಿದ್ದರು ಎನ್ನುತ್ತಾರೆ ಅವರ ಸಂಬಂಧಿಕ ಮೊಹಮ್ಮದ್ ಹನೀಫ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com