ಯುವತಿಯರಿಂದ ಅಶ್ಲೀಲ ನೃತ್ಯ: ಬಾರ್ ಮೇಲೆ ಸಿಸಿಬಿ ದಾಳಿ, 237 ಜನರ ಬಂಧನ

ಯುವತಿಯರಿಂದ ಅಶ್ಲೀಲವಾಗಿ ನೃತ್ಯಮಾಡಿಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದ ಆಪಾದನೆಯ ಮೇರೆಗೆ ನಗರದ ಟೈಮ್ಸ್ ಬಾರ್ ಹಾಗೂ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 237 ಜನರನ್ನು ಬಂಧಿಸಿ, 9.82 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವತಿಯರಿಂದ ಅಶ್ಲೀಲವಾಗಿ ನೃತ್ಯಮಾಡಿಸಿ ಕಾನೂನು ಉಲ್ಲಂಘನೆ ಮಾಡುತ್ತಿದ್ದ ಆಪಾದನೆಯ ಮೇರೆಗೆ ನಗರದ ಟೈಮ್ಸ್ ಬಾರ್ ಹಾಗೂ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 237 ಜನರನ್ನು ಬಂಧಿಸಿ, 9.82 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರದ, ಅಶೋಕನಗರ ಪೊಲೀಸ್ ಠಾಣೆಯ ಸರಹದ್ದಿನ ರೆಸಿಡೆನ್ಸಿ ರಸ್ತೆಯಲ್ಲಿನ ಟೈಮ್ಸ್ ಬಾರ್  ಮತ್ತು ರೆಸ್ಟೋರೆಂಟ್ ನ  ಬಿಗ್ ಬಾಸ್ ಟೈಮ್ಸ್, ಬಾಲಿವುಡ್ ಟೈಮ್ಸ್,  ಪ್ಯಾರೀಸ್ ಟೈಮ್ಸ್, ಟೋಪಾಜ್ ಬಟರ್ ಫ್ಲೈ, ರಾಜ್ ಧನ್‍ಬೀರ್ ಎಂಬ ಹೆಸರಿನ 7 ಹಾಲ್‍ನಲ್ಲಿ ಹುಡುಗಿಯರಿಂದ ಅಶ್ಲೀಲ ನೃತ್ಯ ಮಾಡಿಸಿ, ಲೈಂಗಿಕವಾಗಿ ಪ್ರಚೋದಿಸುವ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದರು.
193 ಜನ ಗಿರಾಕಿ, 44 ಕೆಲಸಗಾರರು ಸೇರಿ ಒಟ್ಟು 237 ಜನರನ್ನು ಪೊಲೀಸರು ಬಂಧಿಸಿದ್ದು, 266 ಯುವತಿಯರನ್ನು ರಕ್ಷಿಸಿದ್ದಾರೆ.ಈ ವೇಳೆ ಅಲ್ಲಿಯೇ ಕುಖ್ಯಾತ ರೌಡಿ ಗಿರಿ ಅಲಿಯಾಸ್ ಕುಣಿಗಲ್ ಗಿರಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪೊಲೀಸರು ದಾಳಿ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. 
ಬಂಧಿತರಿಂದ 9,82,430 ರೂ. ನಗದು, ಸೌಂಡ್ ಸಿಸ್ಟಮ್ಸ್ ಉಪಕರಣಗಳು ( 8 ಆಮ್ಲಿಫೈಯರ್, 6 ಡಿ.ಜಿ. ಮಿಕ್ಸರ್, 13 ಸೌಂಡ್ ಬಾಕ್ಸ್ ಗಳು, ಎರಡು ಕಂಪ್ಯೂಟರ್, ಒಂದು ಮೊಬೈಲ್ ಪೋನ್, ಒಂದು ಕಾರ್ಡ್ ಸ್ವೈಪಿಂಗ್ ಮಷಿನ್ ಹಾಗೂ ಐದು ಬೀಯರ್ ಬಾಟಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 6 ದೂರುಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಅಲ್ಲದೇ, ಡಾನ್ಸ್ ಬಾರ್ ಮಾಲೀಕರ ಮೇಲೂ ಕಠಿಣ  ಕ್ರಮ ಜರುಗಿಸುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com