ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಮಾಜಿ ಶಾಸಕ ರಮಾನಾಥ ರೈಗೆ ಸಮನ್ಸ್

ಯುವ ಬ್ರಿಗೇಡ್ ಮಾರ್ಗದರ್ಶಕ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಆಚ್ಯ ಪದ ಬಲಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಮಾನಾಥ ರೈಗೆ ಮಂಗಳೂರು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

Published: 15th June 2019 12:00 PM  |   Last Updated: 15th June 2019 11:00 AM   |  A+A-


Mangaluru court gives summons to Ex minister Ramanath Rai

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಮಾಜಿ ಶಾಸಕ ರಮಾನಾಥ ರೈಗೆ ಸಮನ್ಸ್

Posted By : RHN RHN
Source : Online Desk
ಮಂಗಳೂರು: ಯುವ ಬ್ರಿಗೇಡ್ ಮಾರ್ಗದರ್ಶಕ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಆಚ್ಯ ಪದ ಬಲಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಮಾನಾಥ ರೈಗೆ ಮಂಗಳೂರು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ರಮಾನಾಥ ರೈ ಸಚಿವರಾಗಿದ್ದ ವೇಳೆ ಅನೈಗೋಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸೂಲಿಬೆಲೆ ಬಗೆಗೆ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ್ದರೆಂದು ಆರೋಪವಿದ್ದು ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಂಗಳುರಿನ  ಜೆಎಂಎಫ್ ಸಿ ಎರಡನೇ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಛಾ ಉಪಾಧ್ಯಕ್ಷರಾದ ರಹೀಂ ಉಚ್ಚಿಲ್ ಅವರು ರೈ ವಿರುದ್ಧ ಪ್ರಕರಣ ದಾಖಲಿಸಿದ್ದರು.ಶನಿವಾರ ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ರೈ ವಿರುದ್ಧ ಪ್ರಕರಣ ದಾಖಲಿಸುಂತೆ ಸೂಚಿಸಿದೆಯಲ್ಲದೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ರೈ ಅವರಿಗೆ ಸಮನ್ಸ್ ನೀಡಿದೆ.

ನ್ಯಾಯಾಲಯದ ಆದೇಶದ ಅನುಸಾರ ಮಾಜಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮಾನನಷ್ಟ್, ಅವಾಚ್ಯ ಪದ ಪ್ರಯೋಗ ಎರಡು ಅಪರಾಧಕ್ಕಾಗಿ  ಐಪಿಸಿ ಸೆಕ್ಷನ್ 500 (ಮಾನಹಾನಿ) ಮತ್ತು 504ರ ಅಡಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp