ಮಂಗಳೂರು ಪೋಲೀಸರ ಯಶಸ್ವಿ ಕಾರ್ಯಾಚರಣೆ: ಭೂಗತ ಪಾತಕಿ ಅಸ್ಗರ್ ಅಲಿ ಬಂಧನ

2 ಕೊಲೆ ಪ್ರಕರಣಗಳು ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು 2007 ರಲ್ಲಿ ನಕಲಿ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಪಲಾಯನ ಮಾಡಿದ ಕುಖ್ಯಾತ ಭೂಗತ ಪತಕಿ ಅಸ್ಗರ್ ಅಲಿಯನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ.
ಅಸ್ಗರ್ ಅಲಿ
ಅಸ್ಗರ್ ಅಲಿ
ಮಂಗಳೂರು: 2 ಕೊಲೆ ಪ್ರಕರಣಗಳು ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು 2007 ರಲ್ಲಿ ನಕಲಿ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಪಲಾಯನ ಮಾಡಿದ ಕುಖ್ಯಾತ ಭೂಗತ ಪತಕಿ ಅಸ್ಗರ್ ಅಲಿಯನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ.
ಕಂಕನಾಡಿ ಪೋಲೀಸ್ ಇನ್ಸ್ ಪೆಕ್ತರ್ ಜಗದೀಶ್ ಮತ್ತು ಪಿಎಸ್ಐ ಶ್ಯಾಮ್ ಸುಂದರ್ ಅವರ ನೇತೃತ್ವದ ಪೊಲೀಸ್ ತಂಡ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಅಲಿಯನ್ನು ಬಂಧಿಸಿದೆ ಎಂದು ಮಂಗಳೂರು ನಗರ  ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ.  ಅಸ್ಗರ್ ಅಲಿ ಜತೆಗೆ ಅವನಿಗೆ ನಕಲಿ ಪಾಸ್‌ಪೋರ್ಟ್‌ ನೀಡಿ ಸಹಕರಿಸಿದ್ದ ಇನ್ನಿಬ್ಬರು ಆರೋಪಿಗಳಾದ  ನವಾಜ್ ಮತ್ತು ರಶೀದ್ ಅವರುಗಳನ್ನು ಸಹ ಬಂಧಿಸಲಾಗಿದೆ.
ವಿದೇಶದಿಂದ ಭಾರತಕ್ಕೆ ಮರಳಿ ಕೇರಳದ ಕಾಸರಗೋಡು ಉಪ್ಪಳದಲ್ಲಿ ತಲೆಮರೆಸಿಕೊಂಡಿದ್ದ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈತನ ಬಂಧನಕ್ಕೆ ಬಲೆ ಬೀಸಲಾಗಿತ್ತು.
ಇದೀಗ ದುಬೈನಲ್ಲಿ ಈತ ನಡೆಸುತ್ತಿದ್ದನೆನ್ನಲಾದ ದಂಧೆಗಳ ಕುರಿತು ವಿಚಾರಣೆ ನಡೆಯಲಿದ್ದು ಈತನೊಡನೆ ಬಂಧಿತರಾದ ಇನ್ನಿಬ್ಬರು ನಕಲಿ ಪಾಸ್‌ಪೋರ್ಟ್‌ ದಾಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಕುರಿತಂತೆ ಸಹ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಪೋಲೀಸರು ಹೇಳೀದ್ದಾರೆ.
ಅಸ್ಗರ್ ಅಲಿ 2005 ರಲ್ಲಿ ನಡೆದ ಪೊಲಲಿ ಅನಂತು ಹತ್ಯೆ ಹಾಗೂ ಟಾರ್ಗೆಟ್ ಗ್ರೂಪ್ ನ ಇಲಿಯಾಸ್ ಕೊಲೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ದುಬೈಗೆ ಓಡಿಹೋದ ನಂತರ, ಈತ ಭೂಗತ ಪಾತಕಿ ದಾವೂದ್ ಹಾಗೂ ಆತನ ಗುಂಪಿನ ಶಾರ್ಫ್ ಶೂಟರ್ ರಷೀದ್ ಮಲಬಾರಿ ಜತೆ ಸಂಪರ್ಕದಲ್ಲಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com