ರೊಹ್ಟಕ್ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆಗೆ ಜಾತಿ ನಿಂದನೆ ಕಾರಣವಾಯ್ತ?

ಹರಿಯಾಣದ ರೊಹ್ಟಕ್ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿ ಓಂಕಾರ್ ಬರಿದಾಬಾದ್ ಆತ್ಮಹತ್ಯೆ ಪ್ರಕರಣ ಇದೀಗ ಜಾತಿಯ ಆಯಾಮ ಪಡೆದುಕೊಂಡಿದೆ.
ಓಂಕಾರ್ ತಾಯಿ ರೋಧಿಸುತ್ತಿರುವ ಚಿತ್ರ
ಓಂಕಾರ್ ತಾಯಿ ರೋಧಿಸುತ್ತಿರುವ ಚಿತ್ರ
ಹುಬ್ಬಳ್ಳಿ:  ಹರಿಯಾಣದ ರೊಹ್ಟಕ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ  ಹುಬ್ಬಳ್ಳಿಯ ವಿದ್ಯಾರ್ಥಿ ಓಂಕಾರ್ ಬರಿದಾಬಾದ್ ಆತ್ಮಹತ್ಯೆ ಪ್ರಕರಣ ಇದೀಗ ಜಾತಿಯ ಆಯಾಮ ಪಡೆದುಕೊಂಡಿದೆ. 
ಜೂನ್ 13 ರಂದು ಓಂಕಾರ್   ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಜಾತಿ ನಿಂಧನೆ ಕಾರಣದಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಪ್ರಬಂಧ ಸಲ್ಲಿಸಲು ಕೊನೆಯ ದಿನದಂದು  ವಿಭಾಗದ ಮುಖ್ಯಸ್ಥೆ  ಗೀತಾ ಗತ್ವಾಲಾ ಸಹಿ ಹಾಕಲು ನಿರಾಕರಿಸಿರುವುದಲ್ಲದೇ, ಮೀಸಲಾತಿ ವಿದ್ಯಾರ್ಥಿ  ಎಂದು ಜಾತಿ ನಿಂದನೆ ಮಾಡಿದ್ದರು. ಇದರಿಂದಾಗಿ  ರೊಹ್ಟಕ್ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿ ಓಂಕಾರ್ ಬರಿದಾಬಾದ್ ಆತಂಕಕ್ಕೊಳಗಾಗಿದ್ದ ಎನ್ನಲಾಗಿದೆ.
ಇದು ಮೊದಲ ಬಾರಿಯೇನಲ್ಲಾ , ಹಲವು ಬಾರಿ ಕಿರುಕುಳ ನೀಡಲಾಗುತಿತ್ತು ಎಂದು ಆತನ ಸ್ನೇಹಿತ ರಾಜೇಶ್ ಬಿ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಶಿಶು ನಾಪತ್ತೆ ಪ್ರಕರಣದಲ್ಲಿ ಓಂಕಾರನನ್ನು ಬಲಿಪಶು ಮಾಡಲಾಗಿತ್ತು. ಆತನನ್ನು ನೋಡಲು ಪೊಲೀಸರು ಬಂದಾಗ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದರು ಎಂದು ರಾಜೀಶ್ ಹೇಳಿದ್ದಾರೆ.
ವಾರ್ಡ್ ನಿಂದ ಶಿಶು ನಾಪತ್ತೆ ಪ್ರಕರಣದ ಜವಾಬ್ದಾರಿ ಹೊರುವಂತೆ ಓಂಕಾರ್ ಮೇಲೆ ಹೆಚ್ ಓಡಿ ಹಾಗೂ ಮತ್ತಿತರ ವೈದ್ಯರು ಬೇಡಿಕೆ ಹಾಕಿದ್ದರು. ನಂತರ ಆ ಪ್ರಕರಣದಿಂದ ಮುಕ್ತನಾಗಲು ಅವರೆ ನೆರವು ನೀಡಿದ್ದರು. 
ಆದಾಗ್ಯೂ, ದಿನಕಳೆದಂತೆ ಪೊಲೀಸರು ಹಾಗೂ ಶಿಶು ಕಳೆದುಕೊಂಡ ಕುಟುಂಬಸ್ಥರು  ಓಂಕಾರ್ ಗೆ ಕಿರುಕುಳ ನೀಡಲು ಆರಂಭಿಸಿದ್ದರು. ತಪ್ಪು ಆರೋಪ ಹೊರಿಸಿ ಕೋರ್ಸ್ ನಿಂದ ಹೊರ ಹೋಗುವಂತೆ ಒತ್ತಡ ಹಾಕಲಾಗಿತ್ತು ಎಂದು ಓಂಕಾರ್ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ಶಿಶು ನಾಪತ್ತೆ ಪ್ರಕರಣದಿಂದ ಮುಕ್ತಗೊಳಿಸಿದ ನಂತರ ಓಂಕಾರ್ ಗೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳು ರೊಹ್ಟಕ್ ವೈದ್ಯಕೀಯ ಕಾಲೇಜ್ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com