ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ; 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ...

Published: 17th June 2019 12:00 PM  |   Last Updated: 17th June 2019 08:26 AM   |  A+A-


IPS officer Alok Kumar

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್

Posted By : SUD SUD
Source : The New Indian Express
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 19 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಐಜಿಪಿ ಆಗಿದ್ದ ಅಲೋಕ್​ಗೆ ಎಡಿಜಿಪಿಯಾಗಿ ಬಡ್ತಿ ನೀಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. ಟಿ. ಸುನಿಲ್ ಕುಮಾರ್ ಅವರನ್ನು ನೇಮಾಕಾತಿ ವಿಭಾಗ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಮ್ರಿತ್ ಪೌಲ್ ಪೂರ್ವ ವಿಭಾಗ ಐಜಿಪಿ ಆಗಿ ನೇಮಕ ಮಾಡಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಉಮೇಶ್ ಕುಮಾರ್, ಗೃಹ ಇಲಾಖೆಯ ಕಾರ್ಯದರ್ಶಿ (PCAS) ಬಿ. ಕೆ. ಸಿಂಗ್ , ಬೆಂಗಳೂರು ಆಂತರಿಕ ಭದ್ರತೆಯ ಐಜಿಪಿಯಾಗಿ ಸೌಮೆಂದು ಮುಖರ್ಜಿ, ದಕ್ಷಿಣ ವಲಯ ಐಜಿಪಿ ಆಗಿ ರಾಘವೇಂದ್ರ ಸುಹಾಸ್, ಸಿಸಿಬಿ ಮುಖ್ಯಸ್ಥರಾಗಿ ರವಿಕಾಂತೇ ಗೌಡ ವರ್ಗಾವಣೆಗೊಂಡಿದ್ದಾರೆ.

ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳ ವಿಭಾಗದ ಎಸ್​ಪಿ ಆಗಿ ಅಮಿತ್ ಸಿಂಗ್, ಎಸಿಬಿ ಎಎಸ್​​ಪಿ ಆಗಿ ರಾಮ್ ನಿವಾಸ್, ರೈಲ್ವೆ ಎಸ್​ಪಿ ಆಗಿ ಎಂ.ಎನ್. ಅನುಚೇತ್​, ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಬಿ ರಮೇಶ್, ಸಿಐಡಿ ಎಸ್​​ಪಿ ಆಗಿ ರವಿ ಡಿ ಚನ್ನಣ್ಣನವರ್, ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ಡಾ. ಭೀಮಾಶಂಕರ್ ಎಸ್ ಗುಳೇದ್, ಮೈಸೂರು ಎಸ್​ಪಿ ಆಗಿ ಸಿ.ಬಿ.  ರಿಶ್ಯಂತ್ ವರ್ಗಾವಣೆ ಗೊಂಡಿದ್ದಾರೆ.

ಮಾಹಮದ್ ಸುಜೀತಾ ಕೋಲಾರ ಎಸ್​ಪಿ ಆಗಿ, ಟಿಪಿ ಶಿವಕುಮಾರ್  ಬೆಂಗಳೂರು ಗ್ರಾಮಾಂತರ ಎಸ್​​ಪಿ ಆಗಿ, ಎನ್ ವಿಷ್ಣುವರ್ಧನ ಬೆಂಗಳೂರು ಅಡಳಿತ ಡಿಸಿಪಿ ಆಗಿ, ಕಲಾಕೃಷ್ಣ ಸ್ವಾಮಿ ಎಫ್ಎಸ್ ಎಲ್ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp