ಚಿಕ್ಕಮಗಳೂರು: ಕುತ್ತಿಗೆಗೆ ಸೀರೆ ಸುತ್ತಿ ಉಯ್ಯಾಲೆಯಾಡುತ್ತಿದ್ದ ಬಾಲಕಿ ಸಾವು!

ಮಕ್ಕಳನ್ನು ಉಯ್ಯಾಲೆಯಡಲು ಬಿಡುವ ಮುನ್ನ ಎಚ್ಚರ! ಉಯ್ಯಾಲೆಯಾಡಲು ಹೋಗಿದ್ದ ಬಾಲಕಿಯೊಬ್ಬಳು ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ....

Published: 17th June 2019 12:00 PM  |   Last Updated: 17th June 2019 09:24 AM   |  A+A-


Chikkamagaluru girl while play swinging

ಚಿಕ್ಕಮಗಳೂರು: ಕುತ್ತಿಗೆಗೆ ಸೀರೆ ಸುತ್ತಿ ಉಯ್ಯಾಲೆಯಾಡುತ್ತಿದ್ದ ಬಾಲಕಿ ಸಾವು!

Posted By : RHN RHN
Source : Online Desk
ಚಿಕ್ಕಮಗಳೂರು: ಮಕ್ಕಳನ್ನು ಉಯ್ಯಾಲೆಯಡಲು ಬಿಡುವ ಮುನ್ನ ಎಚ್ಚರ! ಉಯ್ಯಾಲೆಯಾಡಲು ಹೋಗಿದ್ದ ಬಾಲಕಿಯೊಬ್ಬಳು ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ನಿಸರ್ಗ (9) ಎಂದು ಗುರುತಿಸಲಾಗಿದ್ದು ಈಕೆ ಸಮೀಪದ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲೇ ಸೀರೆಯೊಂದರಲ್ಲಿ ಉಯ್ಯಾಲೆ ಕಟ್ಟಿ ಆಟವಾಡುತ್ತಿದ್ದಾಗ ಬಾಲಕಿಯ ಕುತ್ತಿಗೆಗೆ ಸೀರೆ ಸುತ್ತಿಕೊಂಡಿದೆ. ಆಗ ತಕ್ಷಣ ಆಕೆಯ ಪೋಷಕರು ಸೀರೆಯನ್ನು ಕುತ್ತಿಗೆಯಿಂಡ ಬಿಡಿಸಲು ಯಶಸ್ವಿಯಾಗಿದ್ದರೂ ಅಷ್ಟರಲ್ಲೇ ಬಾಲಕಿಯ ಉಸಿರು ನಿಂತು ಹೋಗಿದೆ.

ಘಟನೆ ಕುರಿತಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp