ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕಾರ

ಬೆಂಗಳೂರು ನಗರದ 34ನೇ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರಿಸಿದ ಅಲೋಕ್ ಕುಮಾರ್
ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರಿಸಿದ ಅಲೋಕ್ ಕುಮಾರ್
ಬೆಂಗಳೂರು: ಬೆಂಗಳೂರು ನಗರದ 34ನೇ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನು ಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಹಾಲಿ ಆಯುಕ್ತರಾಗಿದ್ದ ಟಿ ಸುನೀಲ್ ಕುಮಾರ್ ಅವರು ಅಲೋಕ್ ಕುಮಾರ್ ಅವರಿಗೆ ಪೊಲೀಸ್‌ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು‌.
ಅಲೋಕ್​​ ಕುಮಾರ್ 1994ನೇ ಕೇಂದ್ರ ಲೋಕಸೇವಾ ಆಯೋಗದ ಬ್ಯಾಚ್​ನಲ್ಲಿ ತೇರ್ಗಡೆಯಾಗಿ ಐಪಿಎಸ್​ ಅಧಿಕಾರಿಯಾಗಿದ್ದರು. ಅಲೋಕ್ ಕುಮಾರ್ ಅವರು ಈ ಹಿಂದೆ ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿ, ಸಿಸಿಬಿ ಕ್ರೈಂ ಬ್ರ್ಯಾಂಚ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ತರಬೇತಿ ವಿಭಾಗದ ಐಜಿಪಿಯಾಗಿದ್ದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರಿ ಸದ್ದು ಮಾಡಿದ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರ ಹೆಸರು ಕೇಳಿ ಬಂದಿದ್ದರಿಂದ ಅಮಾನತುಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com