ಟಿಕ್ ಟಾಕ್ ಮಾಡುವಾಗ 'ಲಟಕ್' ಎಂದು ಮುರಿಯಿತು ಯುವಕನ ಕತ್ತು ಮೂಳೆ!

ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದು ಯುವಕನೋರ್ವ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ....

Published: 18th June 2019 12:00 PM  |   Last Updated: 18th June 2019 01:43 AM   |  A+A-


Youth Who Broke A Spinal Cord While Doing Tiktok in Tumkur

ಟಿಕ್ ಟಾಕ್ ಮಾಡಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ ಯುವಕ

Posted By : SD SD
Source : Online Desk
ತುಮಕೂರು:  ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದು ಯುವಕನೋರ್ವ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲುಕಿನ ಗೋಡೆಕೆರೆಯಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತನ ಜೊತೆ ಕುಮಾರ್ ಎಂಬುವವರು ಬ್ಯಾಕ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಅವಾಂತರ ಮಾಡಿಕೊಂಡಿದ್ದಾರೆ. 

ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. 

ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp