ಮನ್ಸೂರ್ ಖಾನ್ ಕಚೇರಿ, 3ನೇ ಪತ್ನಿ ಮನೆ ಮೇಲೆ ಎಸ್ಐಟಿ ದಾಳಿ, 33 ಕೋಟಿ ರೂ. ಬೆಲೆಯ ಚಿನ್ನಾಭರಣ ಜಪ್ತಿ

ಸಾವಿರಾರು ಜನರ ಷೇರು ಸಂಗ್ರಹಿಸಿ ಹೂಡಿಕೆದಾರರ ಹಣವನ್ನು ಹಿಂದಿರುಗಿಸದೇ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮುಹಮ್ಮದ್...

Published: 19th June 2019 12:00 PM  |   Last Updated: 19th June 2019 04:02 AM   |  A+A-


IMA fraud: SIT seizes jewels, property papers worth Rs 33 cr

ಮುಹಮ್ಮದ್ ಮನ್ಸೂರ್ ಖಾನ್

Posted By : LSB LSB
Source : UNI
ಬೆಂಗಳೂರು: ಸಾವಿರಾರು ಜನರ ಷೇರು ಸಂಗ್ರಹಿಸಿ ಹೂಡಿಕೆದಾರರ ಹಣವನ್ನು ಹಿಂದಿರುಗಿಸದೇ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ಅವರ ನಿವಾಸ ಹಾಗೂ ಅವರ ಮೂರನೇ ಪತ್ನಿಯ ನಿವಾಸದ ಮೇಲೆ ವಿಶೇಷ ತನಿಖಾ ತಂಡ(ಎಸ್ಐಟಿ) ದಾಳಿ ನಡೆಸಿದ್ದು, 33 ಕೋಟಿ ರೂ.ಬೆಲೆಯ ಚಿನ್ನಾಭರಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಂಡಿದೆ.

ಎಸ್ಐಟಿ ತಂಡ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ಅವರ ಜಯನಗರದ 11ನೇ ಮುಖ್ಯ ರಸ್ತೆಯಲ್ಲಿರುವ ಐಎಂಎ ಜ್ಯೂವೆಲರ್ಸ್ ಕಚೇರಿಯ ಕಟ್ಟಡದ ಮೇಲೆ ದಾಳಿ ನಡೆಸಿ 13 ಕೋಟಿ ರೂ. ಮೌಲ್ಯದ 43 ಕೆ.ಜಿ. ಚಿನ್ನಾಭರಣ, 17.6 ಕೋಟಿ ರೂ ಮೌಲ್ಯದ 5,864 ಕ್ಯಾರೆಟ್ ಡೈಮಂಡ್ ಹಾಗೂ 1.5 ಕೋಟಿ ಮೌಲ್ಯದ 520 ಕೆ.ಜಿ ಬೆಳ್ಳಿ ಮತ್ತು 1.5 ಕೋಟಿ ರೂ ಮೌಲ್ಯದ ಸೈಲ್ಟರ್ ಡೈಮಂಡ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಸ್ಐಟಿಯ ಮತ್ತೊಂದು ತಂಡವು, ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ಅವರ 3ನೇ ವಿಚ್ಛೇದಿತ ಪತ್ನಿ ತಬಸ್ಸಮ್ ಭಾನು ಅವರ ಶಿವಾಜಿನಗರದ ಗುಲ್ಷನ್ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ 39.5 ಲಕ್ಷ ರೂ ಮೌಲ್ಯದ 1,503.7 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ ಹಾಗೂ 2.69 ಲಕ್ಷ ನಗದು  ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿದೆ.

ಅಲ್ಲದೇ, ತಿಲಕ್ ನಗರದ ಎಸ್ಆರ್ ಕೆ ಗಾರ್ಡನ್ ನಲ್ಲಿ ಹೊಂದಿರುವ 1.20 ಕೋಟಿ ಮೌಲ್ಯದ ಅಪಾರ್ಟ್ ಮೆಂಟ್ ದಾಖಲಾತಿಗಳು ಹಾಗೂ ಮುಹಮ್ಮದ್ ಮನ್ಸೂರ್ ಖಾನ್ ಗೆ ಸೇರಿದವು ಎನ್ನಲಾದ ವಾಣಿಜ್ಯ ಕಟ್ಟಡಗಳು,  ಜಮೀನುಗಳು, ಸ್ಕೂಲ್ ಪ್ರಾಪರ್ಟಿ, ಅಪಾರ್ಟ್ ಮೆಂಟ್  ಮುಂತಾದವು ಸೇರಿದಂತೆ ಒಟ್ಟು 26  ಸ್ಥಿರಾಸ್ತಿಗಳನ್ನು ಈವರೆಗೂ ಎಸ್ಐಟಿ ತಂಡ ಗುರುತಿಸಿದ್ದು, ತನಿಖೆ ಚುರುಕುಗೊಳಿಸಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp