ದುಬೈ ಬೀಚ್ ನಲ್ಲಿ ಐಎಂಎ ನಿರ್ದೇಶಕ ಮನ್ಸೂರ್ ಖಾನ್ ಕಾಣಿಸಿಕೊಂಡ ಕುರಿತು ಮಾಹಿತಿ ಇಲ್ಲ: ಎಸ್ ಐಟಿ ಹೇಳಿಕೆ

ಹೂಡಿಕೆದಾರರಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಪರಾರಿಯಾಗಿರುವ ಐಎಂಎ ನಿರ್ದೇಶಕ ಮನ್ಸೂರ್ ಖಾನ್ ದುಬೈನಲ್ಲಿ ಕಾಣಿಸಿಕೊಂಡಿದ್ದಾನೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಎಸ್ ಐಟಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹೂಡಿಕೆದಾರರಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಪರಾರಿಯಾಗಿರುವ ಐಎಂಎ ನಿರ್ದೇಶಕ ಮನ್ಸೂರ್ ಖಾನ್ ದುಬೈನಲ್ಲಿ ಕಾಣಿಸಿಕೊಂಡಿದ್ದಾನೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಎಸ್ ಐಟಿ ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್ ಐಟಿ ಮುಖ್ಯಸ್ಥ ಹಾಗೂ ಹಿರಿಯ ಐಪಿಎಸ್ ಆಧಿಕಾರಿ ರವಿಕಾಂತೇಗೌಡ ಅವರು, ಕೆಲ ಮಾಧ್ಯಮಗಳಲ್ಲಿ ಮನ್ಸೂರ್ ಖಾನ್ ದುಬೈ ನಲ್ಲಿರುವ ಕುರಿತು ವರದಿಗಳು ಪ್ರಸಾರವಾಗಿವೆ. ಆದರೆ ಈ ಬಗ್ಗೆ ತಮಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು  ಬೆಳಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿರುವಂತೆ ಮನ್ಸೂರ್ ಖಾನ್ ದುಬೈನ ಸುಮಾರು 122 ಕಿ.ಮೀ ದೂರದ ಬೀಚ್ ನಗರಿ ರಾಸ್ ಅಲ್ ಖೈಮಾಹ್ ದಲ್ಲಿ ಕಾಣಿಸಿಕೊಂಡಿದ್ದ ಎಂದು ವರದಿ ಮಾಡಿದ್ದವು. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾಧ್ಯಮಗಳಿಗೆ ರವಿಕಾಂತೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ದುಬೈನಲ್ಲಿ ಮನ್ಸೂರ್ ಖಾನ್ ಪತ್ತೆಯಾಗಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಆತ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂಬುದು ತಿಳಿದಿದೆ. ಆದರೆ ಪ್ರಸ್ತುತ ಎಲ್ಲಿದ್ದಾನೆ ಎಂಬ ವಿಚಾರದ ಕುರತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ನಾವು ಕೇಂದ್ರ ಗೃಹ ಸಚಿವಾಲಯಕ್ಕೆ ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಮನವಿ ಮಾಡಿದ್ದು, ಈ ಕುರಿತು ಅನುಮತಿ ದೊರೆತ ಕೂಡಲೇ ಇಂಟರ್ ಪೋಲ್ ಅನ್ನು ಸಂಪರ್ಕಿಸುತ್ತೇವೆ. ಅಲ್ಲದೆ ಇಂಟರ್ ಪೋಲ್ ಮೂಲಕ ಎಲ್ಲ ದೇಶಗಳಿಗೂ ಮನ್ಸೂರ್ ಖಾನ್ ಕುರಿತು ರೆಡ್ ಕಾರ್ನರ್ ನೋಟಿಸ್ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com