ಪೊಲೀಸರಿಗೆ 1000 ರೂ. ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರ ಪೊಲೀಸರಿಗೆ ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸರಿಗೆ ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಿ ಬುಧವಾರ ಆದೇಶ ಹೊರಡಿಸಿದೆ.
2019-20ನೇ ಆಯವ್ಯಯದಲ್ಲಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಬಜೆಟ್ ಆಶ್ವಾಸನೆಯಂತೆ ಆದೇಶ ಹೊರಡಿಸಲಾಗಿದ್ದು, ಜುಲೈ1ರಿಂದ ಅನ್ವಯವಾಗುವಂತೆ ಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಪೊಲೀಸರ ವೇತನ ಹೆಚ್ಚಳ ಸೇರಿದಂತೆ ಅನೇಕ ಹಕ್ಕೊತ್ತಾಯಗಳ ಮಂಡಿಸಿ 2016ರ ಜೂನ್ ನಲ್ಲಿ ಪೊಲೀಸರು ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಈ ಹೋರಾಟಕ್ಕೆ ಬೆದರಿದ ಸರ್ಕಾರ ಔರಾದ್ಕರ್ ವರದಿ ಜಾರಿ ಮಾಡುವುದರ ಬದಲಾಗಿ ಕಷ್ಟ ಪರಿಹಾರ ಭತ್ಯೆ 1000ರೂ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹಾಲಿ ಮೈತ್ರಿ ಸರ್ಕಾರ ಕಷ್ಟ ಪರಿಹಾರ ಭತ್ಯೆಗೆ ಹೆಚ್ಚುವರಿ 1000 ರೂ ನೀಡುವ ಮೂಲಕ ಪೊಲೀಸರ ಮನ ಗೆಲ್ಲುವ ಕೆಲಸ ಮಾಡಿದೆ. ಆದರೆ ಇದಕ್ಕೆ ಪೊಲಿಸ್ ಸಿಬ್ಬಂದಿ ಸಮಾಧಾನ ಹೊಂದಿಲ್ಲ ಎನ್ನಲಾಗಿದೆ.  ಪೊಲೀಸ್ ಸಿಬ್ಬಂದಿಯ ಏಕೈಕ ಒತ್ತಾಯವಿರುವುದು ವೇತನ ಪರಿಷ್ಕರಣೆ  ಕುರಿತ ಔರಾದ್ಕರ್ ವರದಿ ಜಾರಿಗೊಳಿಸುವುದಾಗಿದೆ. ಆದರೂ ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿ ಭತ್ಯೆ ಹೆಚ್ಚಳ ಮಾಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com