ನಾಳೆ ಸಿಎಂ ಗ್ರಾಮವಾಸ್ತವ್ಯ: ರೈಲೇರಿ ಯಾದಗಿರಿಯತ್ತ ಹೊರಟ ಕುಮಾರಸ್ವಾಮಿ

ಸಿಎಂ ಎಚ್.ಡಿ. ಕುಮಾರಸ್ವಾಮಿ ನಾಳೆ (ಶುಕ್ರವಾರ) ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದು ಇದಕ್ಕಾಗಿ ಗುರುವಾರ ಸಂಜೆ ಬೆಂಗಲೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದರು

Published: 20th June 2019 12:00 PM  |   Last Updated: 20th June 2019 08:59 AM   |  A+A-


CM Grama Vasthavya begins from tomorrow, Kumaraswamy travel by train to Yadgiri

ನಾಳೆ ಸಿಎಂ ಗ್ರಾಮವಾಸ್ತವ್ಯ: ರೈಲೇರಿ ಯಾದಗಿರಿಯತ್ತ ಹೊರಟ ಕುಮಾರಸ್ವಾಮಿ

Posted By : RHN RHN
Source : Online Desk
ಬೆಂಗಳೂರು: ಸಿಎಂ ಎಚ್.ಡಿ. ಕುಮಾರಸ್ವಾಮಿ ನಾಳೆ (ಶುಕ್ರವಾರ) ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದು ಇದಕ್ಕಾಗಿ ಗುರುವಾರ ಸಂಜೆ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದರು

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾನದಲ್ಲಿ ರಾತ್ರಿ 7.30ರ ಸಮಯದಲ್ಲಿ "ಕರ್ನಾಟಕ ಎಕ್ಸ್ ಪ್ರೆಸ್" ರೈಲೇರಿದ ಕುಮಾರಸ್ವಾಮಿ ಶುಕ್ರವಾರ ನಸುಕಿನ 3.48ಕ್ಕೆ ಯಾದಗಿರಿ ರೈಲ್ವೆ ನಿಲ್ದಾಣ ತಲುಪುವವರಿದ್ದಾರೆ.
ಅಲ್ಲಿಂದ ಗ್ರಾಮ ವಾಸ್ತವ್ಯ ನಿಗದಿಯಾಗಿರುವ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮಕ್ಕೆ ರಸ್ತೆ ಮೂಲಕ ಪ್ರಯಾಣ ಬೆಳೆಸುವ ಮುಖ್ಯಮಂತ್ರಿ ಬೆಳಿಗ್ಗೆ 7.30ಕ್ಕೆ ಗ್ರಾಮವನ್ನು ತಲುಪುವರು. ಬೆಳಿಗ್ಗೆ ಹತ್ತರಿಂದ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಜನತಾ ದರ್ಶನ ಇರಲಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp