ನಿಮ್ಮ ಗ್ರಾಮವಾಸ್ತವ್ಯದ ವಾಸ್ತವ ತಿಳಿದುಕೊಳ್ಳಿ: ಸಿಎಂಗೆ ಕೇಂದ್ರ ಸಚಿವ ಸದಾನಂದ ಗೌಡ ಸಲಹೆ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಬಾರಿ ತಮ್ಮ ಗ್ರಾಮ ವಾಸ್ತವ್ಯಕ್ಕೆ ಗ್ರಾಮದ ಯಾರದಾದರೊಬ್ಬರ ...

Published: 20th June 2019 12:00 PM  |   Last Updated: 20th June 2019 12:13 PM   |  A+A-


D V Sadananda Gowda in his residence along with states minister

ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯದ ಸಚಿವರೊಂದಿಗೆ ಡಿ ವಿ ಸದಾನಂದ ಗೌಡ

Posted By : SUD SUD
Source : Online Desk
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಬಾರಿ ತಮ್ಮ ಗ್ರಾಮ ವಾಸ್ತವ್ಯಕ್ಕೆ ಗ್ರಾಮದ ಯಾರದಾದರೊಬ್ಬರ ಮನೆಯನ್ನು ಆಯ್ಕೆ ಮಾಡಿಕೊಳ್ಳದೆ ಶಾಲೆಯನ್ನು ಆಯ್ಕೆ ಮಾಡಿಕೊಂಡದ್ದು ಏಕೆ ಎಂದು ಅರ್ಥವಾಯಿತು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಟೀಕಿಸಿದ್ದಾರೆ.

ಪತ್ರಿಕೆಯೊಂದರಲ್ಲಿ ಫೋಟೋ ಸಮೇತ ಬಂದ ವರದಿಯನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಯಾವ ಉದ್ದೇಶ ಮತ್ತು ನಿರ್ಧಾರ ಇಟ್ಟುಕೊಂಡು ಗ್ರಾಮ ವಾಸ್ತವ್ಯ ಮುಂದುವರಿಸಲು ಹೊರಟಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಸುಳ್ಳು ಭರವಸೆ ಕೊಟ್ಟರೂ ನಂತರ ಪ್ರಶ್ನೆ ಮಾಡುವವರು ಇರುವುದಿಲ್ಲ ಎಂಬ ವಿಶ್ವಾಸ ಅವರಿಗೆ ಬಂದಂತಿದೆ ಎಂದು ಆರೋಪಿಸಿದ್ದಾರೆ.

ಸಾಧ್ಯವಾದರೆ ದಶಕದ ಹಿಂದೆ ನೀವು ಭೇಟಿ ನೀಡಿ ಅಭಯ ಹಸ್ತ (ಅಂಗೈಯಲ್ಲಿ ಅರಮನೆ ) ತೋರಿಸಿದ್ದ ವಿಜಯಪುರ ಜಿಲ್ಲೆಯ ಗ್ರಾಮಕ್ಕೊಮ್ಮೆ ಭೇಟಿ ನೀಡಿ, ನಿಮ್ಮ ಗ್ರಾಮ ವಾಸ್ತ್ಯವ್ಯದ ವಾಸ್ತವ ತಿಳಿದುಕೊಳ್ಳಿ ಎಂದು ಸದಾನಂದ ಗೌಡ ಸಿಎಂಗೆ ಸಲಹೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿಯವರ ಈ ಬಾರಿಯ ಗ್ರಾಮ ವಾಸ್ತವ್ಯಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಹಳ್ಳಿಯಲ್ಲಿ ಯಾರದಾದರೊಬ್ಬರ ಮನೆಯನ್ನು ಆಯ್ಕೆ ಮಾಡಿಕೊಳ್ಳದೆ ಸರ್ಕಾರಿ ಶಾಲೆಯನ್ನು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಿದ್ದಾರೆ. 
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp