ಕಾರವಾರ: ಕುಮಟ ಬೀಚ್ ನಲ್ಲಿ ಭಾರತೀಯ ನೌಕಪಡೆ ಸಿಬ್ಬಂದಿಯಿಂದ ಯೋಗ ಪ್ರದರ್ಶನ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಒಂದು ದಿನ ಬಾಕಿ ಇರುವಂತೆಯೇ ಕಾರವಾರ ನೌಕ ನೆಲೆ ಬಳಿಯ ಕುಮಟ ಬೀಚ್ ನಲ್ಲಿ ಭಾರತೀಯ ನೌಕ ಸಿಬ್ಬಂದಿಗಳು ಇಂದು ಬೃಹತ್ ಯೋಗ ಪ್ರದರ್ಶನ ಮಾಡಿದರು.
ಯೋಗ ಪ್ರದರ್ಶನ
ಯೋಗ ಪ್ರದರ್ಶನ
ಕಾರವಾರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಒಂದು ದಿನ ಬಾಕಿ ಇರುವಂತೆಯೇ  ಕಾರವಾರ ನೌಕ ನೆಲೆ ಬಳಿಯ ಕುಮಟ ಬೀಚ್ ನಲ್ಲಿ ಭಾರತೀಯ ನೌಕ ಸಿಬ್ಬಂದಿಗಳು ಇಂದು ಬೃಹತ್  ಯೋಗ ಪ್ರದರ್ಶನ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ರಕ್ಷಣಾ ಸಿಬ್ಬಂದಿಗಳಲ್ಲಿ ಯೋಗಾಭ್ಯಾಸ ಒಂದು ನಿಯಮವಾಗಿದ್ದು,   ರಕ್ಷಣಾ ವಿಭಾಗದ ಅನೇಕ ವಿಭಾಗಗಳು ಯೋಗ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ.
 ದೆಹಲಿ, ಓಡಿಶಾ ಹಾಗೂ ಅಸ್ಸಾಂನ ಬಿಎಸ್ ಎಫ್ ಶಿಬಿರಗಳಲ್ಲಿ ನಾಳೆ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಕುಮಟ ಬೀಚ್ ನಲ್ಲಿ ಇಂದು ಭಾರತೀಯ ನೌಕಪಡೆಯ ಸಿಬ್ಬಂದಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನಾಗಿ ಆಚರಣೆ ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದರು. ಯೋಗ, ಪ್ರಾಕೃತಿಕ, ಆಯುರ್ವೇದ ಮತ್ತು ಸಿದ್ಧಿ ಚಿಕಿತ್ಸಾ ಪದ್ಧತಿ ಪ್ರೋತ್ಸಾಹಕ್ಕಾಗಿ ಆಯುಷ್ ಸಚಿವಾಲಯವನ್ನು ಮೋದಿ ಸ್ಥಾಪಿಸಿದ್ದಾರೆ.
 ರಾಂಚಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಸಮಾರಂಭದಲ್ಲಿ ಮೋದಿ ಭಾಗವಹಿಸುತ್ತಿದ್ದು, ಸುಮಾರು 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com