ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮಕ್ಕೆ ಕೊನೆಗೂ ಸಿಗಲಿದೆ ರಸ್ತೆ ಸಂಪರ್ಕ ಭಾಗ್ಯ!

ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಗ್ರಾಮಕ್ಕೆ ಕೊನೆಗೂ ರಸ್ತೆ ಭಾಗ್ಯ ಸಿಗುವ ಸಮಯ ಬಂದಿದೆ. ಇಲ್ಲಿಗೆ ಹಲವು ವರ್ಷಗಳಿಂದ ರಸ್ತೆ ಸಂಪರ್ಕವಿರಲಿಲ್ಲ...
ಮೇದಿನಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ
ಮೇದಿನಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಗ್ರಾಮಕ್ಕೆ ಕೊನೆಗೂ ರಸ್ತೆ ಭಾಗ್ಯ ಸಿಗುವ ಸಮಯ ಬಂದಿದೆ. ಇಲ್ಲಿಗೆ ಹಲವು ವರ್ಷಗಳಿಂದ ರಸ್ತೆ ಸಂಪರ್ಕವಿರಲಿಲ್ಲ. 
ನಿನ್ನೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ ಮೇದಿನಿ ಗ್ರಾಮಕ್ಕೆ ಭೇಟಿ ನೀಡಿ ಕುಮಟಾ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುವುದಾಗಿ ಮತ್ತು ಗ್ರಾಮಸ್ಥರಿಗೆ ಮನೆ ಬಾಗಿಲಿಗೆ ಆಹಾರ ಧಾನ್ಯ ಒದಗಿಸಿಕೊಡುವ ಭರವಸೆ ನೀಡಿದರು.
ಮೇದಿನಿ ಗ್ರಾಮಸ್ಥರ ಕಷ್ಟಗಳ ಬಗ್ಗೆ ಜೂನ್ 10ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಗಮನಕ್ಕೆ ಬಂದು ಅವರು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಗೆ ಗ್ರಾಮಕ್ಕೆ ಹೋಗಿ ನೋಡುವಂತೆ ಸೂಚಿಸಿದ್ದರು.
ಮೇದಿನಿ ಗ್ರಾಮ 53 ಮನೆಗಳು ಮತ್ತು 400 ಜನರನ್ನು ಹೊಂದಿರುವ ಸಣ್ಣ ಗ್ರಾಮ. ಕುಮಟಾ ತಾಲ್ಲೂಕಿನಿಂದ 38 ಕಿಲೋ ಮೀಟರ್ ದೂರದಲ್ಲಿ ಸಿದ್ದಾಪುರ ತಾಲ್ಲೂಕಿನ ಗಡಿಯಲ್ಲಿದೆ. ಅಲ್ಲಿಗೆ ತಲುಪಲು ಗ್ರಾಮಸ್ಥರು 8 ಕಿಲೋ ಮೀಟರ್ ಮಣ್ಣಿನ ರಸ್ತೆಯಲ್ಲಿ ಕಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕಾಗಿತ್ತು.
ಜಿಲ್ಲಾಧಿಕಾರಿ ಗ್ರಾಮ ಪಂಚಾಯತ್ ಎಂಜಿನಿಯರ್ ಬಳಿ ಮಾತನಾಡಿ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚ ಎಷ್ಟಾಗಬಹುದು ಎಂದು ವರದಿ ತಯಾರಿಸುವಂತೆ ಸೂಚಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಅರಣ್ಯ ಭೂಮಿ ಒತ್ತುವರಿ ಕುರಿತು ಅರಣ್ಯಾಧಿಕಾರಿ ಜೊತೆ ಮಾತನಾಡಿದ್ದಾರೆ. ವರದಿಯನ್ನು ಸದ್ಯದಲ್ಲಿಯೇ ಮುಖ್ಯಮಂತ್ರಿಗೆ ಕಳುಹಿಸಿ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com