ಗ್ರಾಮ ವಾಸ್ತವ್ಯ ರದ್ದಾಗಿಲ್ಲ, ಭಾರೀ ಮಳೆಯ ಕಾರಣ ಮುಂದೂಡಲಾಗಿದೆ: ಸಿಎಂ ಕುಮಾರಸ್ವಾಮಿ

ಗ್ರಾಮವಾಸ್ತವ್ಯ ಕಾರ್ಯಕ್ರಮ ರದ್ದಾಗಿಲ್ಲ, ಮುಂದೂಡಲ್ಪಟ್ಟಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Published: 22nd June 2019 12:00 PM  |   Last Updated: 22nd June 2019 12:40 PM   |  A+A-


village stay programme not cancelled but postponed due to heavy rain says CM H D Kumaraswamy

ಸಂಗ್ರಹ ಚಿತ್ರ

Posted By : SVN SVN
Source : ANI
ಯಾದಗಿರಿ: ಗ್ರಾಮವಾಸ್ತವ್ಯ ಕಾರ್ಯಕ್ರಮ ರದ್ದಾಗಿಲ್ಲ, ಮುಂದೂಡಲ್ಪಟ್ಟಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾದ ಹಿನ್ನಲೆಯಲ್ಲಿ ಗ್ರಾಮ ವಾಸ್ತವ್ಯ ರದ್ದಾಗಿದೆ ಎಂದು ಹೇಳಲಾಗಿತ್ತು.  ಆದರೆ ಕಲಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಆಫ್ಜಲಪುರ ತಾಲ್ಲೂಕಿನ ಹೆರೂರ (ಬಿ) ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಗ್ರಾಮ ವಾಸ್ತವ್ಯ ರದ್ದಾಗಿಲ್ಲ, ಮುಂದೂಡಲಾಗಿದೆ. ಜುಲೈ ಎರಡನೇ ವಾರದಲ್ಲಿ ಅಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಚಂಡರಕಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವ್ಯ ಮುಂದೂಡಲಾಗಿದೆ ಎನ್ನುವುದಕ್ಕಿಂತ ಈ ಭಾಗದಲ್ಲಿ ಆಶಾದಾಯಕ ಮಳೆ ಬಂದಿದೆ. ಹೀಗಾಗಿ ವಾಸ್ತವ್ಯ ಮುಂದೂಡಲಾಗಿದೆ. ಈ ಭಾಗದ ಜನರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಕ್ಷಮೆಯನ್ನು ಕೇಳುತ್ತೇನೆ. ಜುಲೈನಲ್ಲಿ 10 ದಿನಗಳ ವಿಧಾನಸಭೆ ಅಧಿವೇಶನ ನಡೆಸಬೇಕಾಗಿದೆ. ಅದರಿಂದ ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡರಕಿ ಗ್ರಾಮ ವಾಸ್ತವ್ಯದಲ್ಲಿ ಜನ ಸಾಮಾನ್ಯರ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಕೆಲ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಮಾತ್ರ ಬಗೆಹರಿಸಬಹುದಾಗಿದೆ. ಹೀಗಾಗಿ ಆ ಪ್ರಕರಣಗಳನ್ನು ಇತ್ಯರ್ಥಪಡಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ಕಲಬುರ್ಗಿ ತಾಲ್ಲೂಕಿನ ಹೇರೂರ ಗ್ರಾಮದಲ್ಲಿ ಸಿಎಂ ಜನತಾದರ್ಶನಕ್ಕೆ ಹಾಕಿದ್ದ ಪೆಂಡಾಲ್ ಕೂಡ ಮಳೆಗೆ ಹಾಳಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp