ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು

ಪ್ರವಾಸ ಬಂದಿದ್ದ ಯುವಕನೊಬ್ಬ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಲಲು ಹೋಗಿ ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಹಾಸನ ಜಿಲ್ಲೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು
ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು
ಹಾಸನ: ಪ್ರವಾಸ ಬಂದಿದ್ದ ಯುವಕನೊಬ್ಬ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಲಲು ಹೋಗಿ ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಹಾಸನ ಜಿಲ್ಲೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಮೃತನನ್ನು ಬೆಂಗಳೂರಿನ ತಿಗಳರ ಪಾಳ್ಯದ ನಿವಾಸಿ ತನುಷ್(23)  ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಸಕಲೇಶಪುರ ತಾಲೂಕಿನ ಮೂಕನ ಮನೆ ಜಲಪಾತಕ್ಕೆ ನಾಲ್ವರು ಯುವಕರು ಟ್ರಿಪ್ ಬಂದಿದ್ದರು. ಎರಡು ದಿನಗಳ ಕಾಲ ಪ್ರವಾಸಕ್ಕೆಂದು ಆಗಮಿಸಿದ್ದ ಇವರು ಮಡಿಕೇರಿ ನೋಡಿಕೊಂಡು ನಂತರ ಸಕಲೇಶಪುರದ ಮೂಕನಮನೆ ಜಲಪಾತಕ್ಕಾಗಿ ಆಗಮಿಸಿದ್ದಾರೆ. ಆದರೆ ಜಲಪಾತ ಸಮೀಪ ಬಂಡೆಯೊಂದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳ ಹೋದ ತನುಷ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.
ಇದೇ ವೇಳೆ ಉಳಿದ ಸ್ನೇಹಿತರು ತನುಷ್ ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೆ ಹೋಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೋಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದಾರೆ.
ಘಟನೆ ಕುರಿತಂತೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com