ಟಿಕ್‍ಟಾಕ್ ದುರಂತ: ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡಿದ್ದ ತುಮಕೂರಿನ ಯುವಕ ಸಾವು, ಭೀಕರ ವಿಡಿಯೋ!

ಟಿಕ್‍ಟಾಕ್ ವಿಡಿಯೋ ಮಾಡುವ ಆಸೆಗೆ ಜೀವವೊಂದು ಬಲಿಯಾಗಿದೆ. ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದುಕೊಂಡು ಸಾವು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಟಿಕ್‍ಟಾಕ್ ವಿಡಿಯೋ ಮಾಡುವ ಆಸೆಗೆ ಜೀವವೊಂದು ಬಲಿಯಾಗಿದೆ. ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದುಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತುಮಕೂರಿನ ಯುವಕ ಕೊನೆಗೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಐದು ದಿನಗಳ ಹಿಂದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲುಕಿನ ಗೋಡೆಕೆರೆಯಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತನ ಜೊತೆ ಕುಮಾರ್ ಎಂಬುವವರು ಬ್ಯಾಕ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಅವಾಂತರ ಮಾಡಿಕೊಂಡಿದ್ದರು.
ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದನು.
ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com