ಪ್ರೀತಿಸಿದ ತಪ್ಪಿಗೆ ಯುವಕನಿಗೆ ಕರೆಂಟ್ ಶಾಕ್, ಸಾವು ಬದುಕಿನ ನಡುವೆ ಪ್ರಿಯಕರ ಹೋರಾಟ!

ತಮ್ಮ ಮಗಳನ್ನು ಪ್ರೀತಿಸುತ್ತಿದ್ದಾನೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಯುವಕನನ್ನು ಒಂದು ವಾರದ ಹಿಂದೆ ಕಿಡ್ನಾಪ್ ಮಾಡಿ ಶಾಕ್ ಟ್ರಿಟ್ ಮೆಂಟ್ ಕೊಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Published: 24th June 2019 12:00 PM  |   Last Updated: 24th June 2019 04:29 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಳಗಾವಿ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದಾನೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಯುವಕನನ್ನು ಒಂದು ವಾರದ ಹಿಂದೆ ಕಿಡ್ನಾಪ್ ಮಾಡಿ ಶಾಕ್ ಟ್ರಿಟ್ ಮೆಂಟ್ ಕೊಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳ ರಾಯಬಾಗಕರ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಮಡಿವಾಳ ಯುವತಿಯೊರ್ವಳನ್ನು ಪ್ರೀತಿಸುತ್ತಿದ್ದು ಈ ವಿಚಾರ ಕೆಲ ತಿಂಗಳ ಹಿಂದೆ ಹುಡುಗಿಯ ಪೋಷಕರಿಗೆ ತಿಳಿದಿದು ನಂತ ಯುವಕನಿಗೆ ಧಮ್ಕಿ ಹಾಕಿ ಊರನ್ನೇ ಬಿಡಿಸಿದ್ದರು.

ಊರು ತೊರೆದಿದ್ದರು ಯುವಕ ಯುವತಿಯ ಜೊತೆಗೆ ಸಂಪರ್ಕದಲ್ಲಿದ್ದ ಇದನ್ನು ತಿಳಿದ ಹುಡುಗಿಯ ಸಂಬಂಧಿಕಾರದ ಉಳಪ್ಪ, ಸಿದ್ದಪ್ಪ ಮತ್ತು ಮಡಿವಾಳ ಕಾಳೆ ಉಪಾಶಿ ನಾಧಾಪ್ ಎಂಬುವರು ಕಳೆದ ವಾರ ಯುವಕನನ್ನು ಕಿಡ್ನಾಪ್ ಮಾಡಿ ನಂತರ ಚಿತ್ರಹಿಂಸೆ ನೀಡಿದ್ದಾರೆ. 

ಗಂಭೀರವಾಗಿ ನಿತ್ರಾಣಗೊಂಡಿದ್ದ ಮಡಿವಾಳನನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಎರಡು ಕಿಡ್ನಿ ಹಾಳಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಸಂಬಂಧ ದೂರು ದಾಖಲಾಗಿದೆ.
Stay up to date on all the latest ರಾಜ್ಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp