ಖಾಸಗಿ ಬಸ್ ಮುಷ್ಕರ; ಕೆಎಸ್ಆರ್ ಟಿಸಿಯಿಂದ ಕೇರಳಕ್ಕೆ ನಾಲ್ಕು ಹೆಚ್ಚುವರಿ ಬಸ್

ಕೇರಳಕ್ಕೆ ಹೋಗುವ ಖಾಸಗಿ ಬಸ್ಸುಗಳು ಸಂಚಾರ ಸೇವೆಯನ್ನು ನಿಲ್ಲಿಸಿ ಮುಷ್ಕರ ನಿರತರಾಗಿರುವುದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇರಳಕ್ಕೆ ಹೋಗುವ ಖಾಸಗಿ ಬಸ್ಸುಗಳು ಸಂಚಾರ ಸೇವೆಯನ್ನು ನಿಲ್ಲಿಸಿ ಮುಷ್ಕರ ನಿರತರಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ರಾಜ್ಯ ರಸ್ತೆ ಸಾರಿಗೆ ನಿಗಮ ಕೆಲ ದಿನಗಳವರೆಗೆ ಕೇರಳಕ್ಕೆ ಹೆಚ್ಚು ಬಸ್ಸುಗಳ ಸೇವೆಯನ್ನು ನೀಡುತ್ತಿದೆ.
ಕಲ್ಲಡ ಬಸ್ ದುರಂತ ಹಿನ್ನಲೆಯಲ್ಲಿ ಮೋಟಾರು ವಾಹನ ಇಲಾಖೆಯ ಕಿರುಕುಳ ಸಹಿಸದೆ ಅಂತರ ರಾಜ್ಯ ಬಸ್ಸು ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಕೇರಳಕ್ಕೆ ಸಂಚರಿಸುವ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. 
ಬೆಂಗಳೂರಿನಿಂದ ಕೇರಳಕ್ಕೆ ಸುಮಾರು 25 ಬಸ್ಸುಗಳು ಸಂಚರಿಸುತ್ತಿದ್ದು ಅವುಗಳಲ್ಲಿ ಬಹುತೇಕ ಬಸ್ಸುಗಳು ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತಿವೆ. ಕೇರಳದಿಂದ ಸಹ ಬೆಂಗಳೂರಿಗೆ ಅಷ್ಟೇ ಸಂಖ್ಯೆಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಮುಷ್ಕರದಿಂದ ಕೇರಳ-ಕರ್ನಾಟಕಕ್ಕೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಕೆಎಸ್ಆರ್ ಟಿಸಿ ನಾಲ್ಕು ಹೆಚ್ಚಿನ ಬಸ್ಸುಗಳನ್ನು ಎರ್ನಾಕುಲಂ, ತ್ರಿಶೂರ್, ಕಣ್ಣನ್ನೂರು ಮತ್ತು ಪಾಲಕ್ಕಾಡ್ ಗೆ ಕಳುಹಿಸುತ್ತಿದೆ. 
ಬಸ್ಸುಗಳ ಸಂಚಾರ ಇಲ್ಲವೆಂದು ಪ್ರಯಾಣಿಕರಿಗೆ ಗೊತ್ತಾದ ನಂತರ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com