ಧಾರವಾಡ: 15 ವರ್ಷಗಳ ನಂತರ ಮತ್ತೆ ಆರಂಭವಾಗಲಿದೆ ಜೈಲು ಕಾರ್ಖಾನೆ

ಮೂಲ ಸೌಕರ್ಯಗಳ ಕೊರತೆ ಹಿನ್ನಲೆಯಲ್ಲಿ ಬಂದ್ ಆಗಿದ್ದ ಧಾರವಾಡ ಕೇಂದ್ರ ಕಾರಾಗೃಹದ ಪೀಠೋಪಕರಣ ಕಾರ್ಖಾನೆ 15 ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿದೆ.
ಜೈಲಿನ ಕೈದಿಗಳು
ಜೈಲಿನ ಕೈದಿಗಳು
ಧಾರವಾಡ: ಮೂಲ ಸೌಕರ್ಯಗಳ ಕೊರತೆ ಹಿನ್ನಲೆಯಲ್ಲಿ ಬಂದ್ ಆಗಿದ್ದ ಧಾರವಾಡ ಕೇಂದ್ರ ಕಾರಾಗೃಹದ ಪೀಠೋಪಕರಣ ಕಾರ್ಖಾನೆ 15 ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿದೆ.
ಕೈದಿಗಳಿಂದಲೇ ಈ ಪೀಠೋಪಕರಣ ಕಾರ್ಖಾನೆ ನಡೆಯಲಿದ್ದು, ಇಲ್ಲಿ ತಯರಾದ ಪಿಠೋಪಕರಣಗಳನ್ನು ಹೊರಗಡೆ ಮಾರಾಟ ಮಾಡಲಾಗುತ್ತದೆ.
ಕಟ್ಟಿಗೆ ಕತ್ತರಿಸಲು ಮತ್ತು ಪಿಠೋಪಕರಣಗಳ ವಿನ್ಯಾಸಕ್ಕಾಗಿ ಹಲವು ಯಂತ್ರಗಳನ್ನು ಇಲ್ಲಿ ಬಳಸಲಾಗುತ್ತಿದ್ದು, ಡೈನಿಂಗ್ ಟೇಬಲ್, ಟೀಪಾಯ್, ಮಂಚ, ಕುರ್ಚಿ ಸೇರಿದಂತೆ ಹಲವು ಪಿಠೋಪಕರಣಗಳನ್ನು ತಯಾರಿಸಲಾಗುತ್ತದೆ.
ಕಳೆದ ಹಲವು ವರ್ಷಗಳಿಂದ ಈ ಕಾರ್ಖಾನೆ ಬಂದ್ ಆಗಿದ್ದು, ಈಗ ಅದನ್ನು ಮತ್ತೆ ಆರಂಭಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಇತರೆ ಕೈದಿಗಳಿಗೆ ತೊಂದರೆಯಾಗದಂತೆ ಈ ಕಾರ್ಖಾನೆ ನಡೆಸಲಾಗುವುದು ಎಂದು ಜೈಲು ಅಧೀಕ್ಷಕಿ ಅನಿತಾ ಆರ್ ಅವರು ತಿಳಿಸಿದ್ದಾರೆ.
ಕಾರ್ಖಾನೆ ಆರಂಭಿಸುವುದಕ್ಕಾಗಿ 100 ಕೈದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಸಣ್ಣ ಪುಟ್ಟ ತಾಂತ್ರಿಕ ಕೆಲಸಗಳು ಬಾಕಿ ಇದ್ದು, ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಅನಿತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com