ಬೆಂಗಳೂರು: ಹೆಂಡತಿಯಿಂದ ದೂರವಾದ ಗಂಡ ಸಿನಿಮೀಯ ರೀತಿಯಲ್ಲಿ ರೈಲಿನಲ್ಲಿ ಸಿಕ್ಕಿಬಿದ್ದ!

ಕೌಟುಂಬಿಕ ಕಾರಣಗಳಿಂದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿ, ಬಳಿಕ ಆಕೆಯಿಂದ ದೂರಾಗಿ ವಾಸಿಸುತ್ತಿದ್ದ ಗಂಡ ಬೆಂಗಳೂರಿನಲ್ಲಿ ರೈಲಿನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಕೌಟುಂಬಿಕ ಕಾರಣಗಳಿಂದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿ, ಬಳಿಕ ಆಕೆಯಿಂದ ದೂರಾಗಿ ವಾಸಿಸುತ್ತಿದ್ದ ಗಂಡ ಬೆಂಗಳೂರಿನಲ್ಲಿ ರೈಲಿನಲ್ಲಿ ಸಿನಿಮೀಯ ರೀತಿಯಲ್ಲಿ ಪತ್ನಿಗೆ ಎದುರಾಗಿ ಸಿಕ್ಕಿರುವ ಅಪರೂಪದ ಘಟನೆ ಜರುಗಿದೆ. 
ಚೈನ್ನೈ ಮೂಲದ ಸಾಫ್ಟವೇರ್ ಇಂಜಿನಿಯರ್ ಬಾಲಮುರುಗನ್ 2011 ರಲ್ಲಿ ರೇಖಾ ಎಂಬಾಕೆಯನ್ನ ಮದುವೆಯಾಗಿದ್ದ. ದಂಪತಿಗೆ ಆರು ವರ್ಷದ ಹೆಣ್ಣು ಮಗು ಸಹ ಇದೆ. ಆದರೆ 2015 ರಲ್ಲಿ ಕೌಟುಂಬಿಕ ಕಲಹದಿಂದಾಗಿ ಬಾಲಮುರುಗನ್ ಪತ್ನಿಗೆ ಡೈವೋರ್ಸ್ ನೀಡಲು ಮುಂದಾಗಿದ್ದ. ಕೋರ್ಟ್ ಮೆಟ್ಟಿಲೇರಿ, ಬಳಿಕ ಆಕೆಯಿಂದ ಸಂಪರ್ಕ ಕಡಿದುಕೊಂಡು ಬೇರೆ ವಾಸವಿದ್ದ.
ಗಂಡನನ್ನ ಹುಡುಕಾಡುತ್ತಿದ್ದ ರೇಖಾ ಇದೇ ತಿಂಗಳು 23 ರಂದು ಚೆನ್ನೈ- ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದಳು. ಪರಿಚಿತರೊಬ್ಬರು ರೇಖಾಗೆ ಕರೆ ಮಾಡಿ ಬಾಲಮುರುಗನ್ ಅದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದರು. ಮಾರ್ಗ ಮಧ್ಯೆ ಗಂಡನನ್ನ ಹುಡುಕಾಡಿದ್ದ ರೇಖಾ. 
ತಾನು ಇದ್ದ S-4 ಬೋಗಿಯಿಂದ S-3 ಬೋಗಿಗೆ ಬಂದ ರೇಖಾಳಿಗೆ ಗಂಡ ಎದುರಾಗಿದ್ದ. ಆತನ ಬಳಿ ಹೋಗಿ 'ನನಗೆ ಯಾರೂ ಇಲ್ಲ. ನಾನು ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಹೊರಟಿದ್ದೆ. ನನಗೆ ಯಾಕೆ ವಿಚ್ಛೇದನ ನೀಡುತ್ತಿದ್ದೀಯಾ? ನಾನು ನಿನ್ನನ್ನು ಹೇಗೆ ಹುಡುಕುವುದು? ನನಗೆ ನಿನ್ನ ಮೊಬೈಲ್ ನಂಬರ್, ವಿಳಾಸವಾದರೂ ನೀಡು ಎಂದು ಅಂಗಲಾಚಿದ್ದಳು. ನಿರಾಕರಿಸಿದ ಗಂಡ ಬಾಲಮುರುಗನ್ ರೈಲಿನಲ್ಲೇ ಎಲ್ಲರ ಮುಂದೆ ಆಕೆಯನ್ನು ತಳ್ಳಿ ಗಲಾಟೆ ಮಾಡಿದ್ದ. ಪ್ರಶ್ನಿಸಿದ ಸಹ ಪ್ರಯಾಣಿಕರನ್ನು ಬಾಯಿಗೆ ಬಂದಂತೆ ನಿಂದನೆ ಮಾಡಿದ್ದ.
ಇದು ನನ್ನ ಕುಟುಂಬದ ವಿಚಾರ, ಇದನ್ನು ಬೇರೆಯವರು ಪ್ರಶ್ನಿಸುವಂತಿಲ್ಲ ಎಂದು ಎಲ್ಲರ ಬಾಯಿ ಮುಚ್ಚಿಸಿದ ಆತ ಅಲ್ಲಿಂದ ಹೊರಟು ಹೋಗಿದ್ದ. ಈ ಸಂಬಂಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ ರೇಖಾ, ಗಂಡನ ವಿರುದ್ಧ ಕ್ರಮ‌ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಂಬಂಧಿಕರು ನೀಡಿದ ಮಾಹಿತಿ ಮೂಲಕ ಗಂಡನನ್ನ ಹುಡುಕಾಡಿ ಪತ್ತೆ ಪೊಲೀಸರು ಮಾಡಬೇಕಾದ ಕೆಲಸವನ್ನು ಪತ್ನಿಯೇ ಮಾಡಿ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com